ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಸುಂಕ ವಾರ್‌ಗೆ ತಾತ್ಕಾಲಿಕ ಬ್ರೇಕ್ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ.
ಇಂದು ಭಾರತೀಯ ಷೇರುಪೇಟೆಗಳು ಶೇಕಡಾ.2ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಸೆನ್ಸೆಕ್ಸ್‌ನಲ್ಲಿ 1600 ಪಾಯಿಂಟ್, ನಿಫ್ಟಿಯಲ್ಲಿ 500 ಪಾಯಿಂಟ್‌ಗಳ ಏರಿಕೆ ಕಂಡುಬಂದಿದೆ. ಆಟೋ ಸೆಕ್ಟರ್ ಷೇರುಗಳಲ್ಲಿ ಹೆಚ್ಚಿನ ಏರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಮುಂಬೈ ಷೇರುಪೇಟೆಯಲ್ಲಿ 30 ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1600ಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡರೆ, ನಿಫ್ಟಿ ಮತ್ತೆ 23,000 ಮಟ್ಟವನ್ನು ತಲುಪಿದೆ.





