Mysore
23
broken clouds
Light
Dark

“ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌” ಸೇರಿದ ಭಾರತೀಯ ರೈಲ್ವೆ ಸಚಿವಾಲಯ

ನವದೆಹಲಿ: ಏಕಕಾಲದಲ್ಲಿ ಹಲವು ಸ್ಥಳಗಳಲ್ಲಿ ನಡೆದ ಸಾರ್ವಜನಿಕ ಸೇವಾ ಸಮಾರಂಭಕ್ಕೆ ತೆರಳುವಲ್ಲಿ ಹೆಚ್ಚು ಜನರಿಗೆ ತನ್ನ ಸೇವೆಯನ್ನು ಒದಗಿಸಿರುವ ಮೂಲಕ ಭಾರತೀಯ ರೈಲ್ವೆ ಸಚಿವಾಲಯ “ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌”ನಲ್ಲಿ ಸೇರ್ಪಡೆಗೊಂಡಿದೆ.

ರೈಲ್ವೆ ಸಚಿವಾಲಯವು ಇದೇ ಫೆ.26 ರಂದು ನರೇಂದ್ರ ಮೋದಿ ಅವರಿಂದ ವರ್ಚುವಲ್‌ ಮೂಲಕ ವಿವಿಧೆಡೆ ರೈಲ್ವೆ ಬ್ರಿಡ್ಜ್‌, ರೈಲು ನಿಲ್ದಾಣಗಳ ಶಂಕುಸ್ಥಾಪನೆ ನೆರವೇರಿಸಿದ್ದರು. ಇದು ದೇಶದ 2,140 ಯಾತ್ರಾ ಸ್ಥಳಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 40,19,516 ಜನರು ಭಾಗವಹಿಸಿದ್ದರು. ಇದರಿಂದ ಭಾರತೀಯ ರೈಲ್ವೆಯ ಬೃಹತ್‌ ಪ್ರಯತ್ನ ಹಾಗೂ ಕಾರ್ಯಕ್ಷಮತೆಯನ್ನು ಗುರುತಿಸುವ ಮೂಲಕ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ ಗೌರವಿಸಿದೆ.

ಈ ಬಗ್ಗೆ ಸಂತಸ ಹಂಚಿಕೊಂಡಿರುವ ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌, ರೈಲ್ವೆ ಜತೆ ಪ್ರಧಾನಿ ಮೋದಿ ಅವರು ವಿಶೇಷ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಜನರಿಂದ ಮತ್ತೊಮ್ಮೆ ಆಶೀರ್ವಾದ ಪಡೆದು ಜನ ಸೇವೆ ಮಾಡಲು ಮೋದಿ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ಕಳೆದ ಹತ್ತಯ ವರ್ಷಗಳಿಂದ ರೈಲ್ವೆ ಅಭಿವೃದ್ಧಿಗೆ ಮೋದಿ ಕೊಡುಗೆ ಅಪಾರ ಎಂದು ಬಣ್ಣಿಸಿದರು.

Image