Mysore
30
few clouds

Social Media

ಗುರುವಾರ, 15 ಜನವರಿ 2026
Light
Dark

ಭಾರತೀಯ ಸೇನೆಯಿಂದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯ ಹೊಸ ವಿಡಿಯೋ ಬಿಡುಗಡೆ

ನವದೆಹಲಿ: ಸೇನಾ ದಿನದ ಅಂಗವಾಗಿ ಇಂದು ಭಾರತೀಯ ಸೇನೆಯು ಹೊಸ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಇದರಲ್ಲಿ ಕಳೆದ ವರ್ಷ ನಡೆದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯ ಸಂದರ್ಭದಲ್ಲಿ ಗಡಿಯಾಚೆಗಿನ ಭಯೋತ್ಪಾದಕ ಶಿಬಿರಗಳ ಮೇಲೆ ನಡೆದ ನಿಖರ ದಾಳಿಗಳು ಹಾಗೂ ನಂತರದ ಪಾಕಿಸ್ತಾನಿ ವಾಯುನೆಲೆಗಳು ಮತ್ತು ಅವುಗಳ ರಾಡೃ ವ್ಯವಸ್ಥೆಗಳ ಮೇಲಿನ ದಾಳಿಗಳನ್ನು ತೋರಿಸಲಾಗಿದೆ.

ಮೂರು ನಿಮಿಷಗಳ ವಿಡಿಯೋವು 2001ರಲ್ಲಿ ಸಂಸತ್ತಿನ ಮೇಲಿನ ದಾಳಿ, 2002ರಲ್ಲಿ ಅಕ್ಷರಧಾಮ ದೇವಾಲಯ, 2008ರಲ್ಲಿ ಮುಂಬೈ, 2016ರಲ್ಲಿ ಪುಲ್ವಾಮಾ ಮತ್ತು 2025ರಲ್ಲಿ ಪಹಲ್ಗಾಮ್‌ ಸೇರಿದಂತೆ ಪ್ರಮುಖ ಭಯೋತ್ಪಾದಕ ಘಟನೆಗಳನ್ನು ಪಟ್ಟಿ ಮಾಡುವ ಮೂಲಕ ಪ್ರಾರಂಭವಾಗುತ್ತದೆ.

ಈ ವಿಡಿಯೋವು ಮೇ.7, 2025ರ ರಾತ್ರಿ ಒಂಭತ್ತು ಭಯೋತ್ಪಾದಕ ಗುರಿಗಳ ಮೇಲೆ ಭಾರತೀಯ ಪಡೆಗಳು ಹೇಗೆ ದಾಳಿ ನಡೆಸಿದವು ಎಂಬುದನ್ನು ತೋರಿಸಿದೆ.

ಆಪರೇಷನ್‌ ಸಿಂಧೂರ್‌ ಭಾಗವಾಗಿ ನಡೆಸಲಾದ ಸಂಘಟಿತ ದಾಳಿಗಳನ್ನು ದೃಶ್ಯಗಳು ತೋರಿಸಿವೆ. ಪಾಕಿಸ್ತಾನವನ್ನು ಹೆಸರಿಸದೇ, ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶಗಳ ಬಳಿ ಪಾಕಿಸ್ತಾನ ನಡೆಸಿದ ಭಾರೀ ಶೆಲ್‌ ದಾಳಿಯ ನಂತರದ ಪರಿಣಾಮಗಳ್ನನು ಸಹ ವಿಡಿಯೋದಲ್ಲಿ ತೋರಿಸಲಾಗಿದೆ. ಡ್ರೋನ್‌ಗಳನ್ನು ಹೊಡೆದುರುಳಿಸುವ ಮೂಲಕ ಹಾಗೂ ಮಿಲಿಟರಿ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಪಡೆಗಳು ನಡೆಸಿದ ಪ್ರತೀಕಾರವನ್ನು ಸಹ ಇದು ತೋರಿಸಿದೆ.

Tags:
error: Content is protected !!