Mysore
30
clear sky

Social Media

ಶುಕ್ರವಾರ, 06 ಮಾರ್ಚ್ 2026
Light
Dark

ವಿಜಯ್ ಮಲ್ಯರನ್ನು ಭಾರತಕ್ಕೆ ಕರೆತರಲು ವಿದೇಶದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಭಾರತ

ಹೊಸದಿಲ್ಲಿ: ಭಾರತ ದೇಶ ಬಿಟ್ಟು ಪಲಾಯನ ಮಾಡಿರುವ ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯರನ್ನು ಯಾವುದೇ ಷರತ್ತುಗಳಿಲ್ಲದೇ ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಫ್ರಾನ್ಸ್ ಸರ್ಕಾರಕ್ಕೆ ಭಾರತ ಮನವಿ ಮಾಡಿದೆ.

ಏ.15 ರಂದು ನಡೆದ ಭಾರತ- ಫ್ರಾನ್ಸ್ ಜಂಟಿ ಕಾರ್ಯಾಚರಣೆ ಸಭೆಯಲ್ಲಿ ವಿಜಯ ಮಲ್ಯ‌ ವಿಷಯ ಕುರಿತು ಚರ್ಚಿಸಲಾಯಿತು. ಈ ವೇಳೆ ಫ್ರಾನ್ಸ್ ಅಧಿಕಾರಿಗಳು ಕೆಲವು ಷರತ್ತುಗೊಳೊಂದಿಗೆ ಹಸ್ತಾಂತರಿಸಲು ಹೇಳಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಭಾರತ ಯಾವುದೇ ಪೂರ್ವ ಷರತ್ತುಗಳಿಲ್ಲದೇ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ತಿಳಿಸಿತು.

ವಿಜಯ್ ಮಲ್ಯ ಪ್ರಸ್ತುತ ಬ್ರಿಟನ್‌ಲ್ಲಿದ್ದಾರೆ. ಆದರೆ ಫ್ರಾನ್ಸ್‌ನಲ್ಲೂ ಅವರು ಆಸ್ತಿ ಹೊಂದಿದ್ದಾರೆ. ಬೇರೆ ಬೇರೆ ದೇಶಗಳಿಗೆ ಮಲ್ಯ ಪಲಾಯನ ಮಾಡದಂತೆ ಜೊತೆಗೆ ವಿದೇಶಗಳಲ್ಲಿ ಗಡಿಪಾರು ಕುರಿತು ಭಾರತ ಮಾತುಕತೆ ನಡೆಸುತ್ತಿದೆ.

Tags:
error: Content is protected !!