ಪ್ರಯಾಗ್ ರಾಜ್: ತುರ್ತು ಪರಿಸ್ಥಿತಿ ಕಾಲದಿಂದಲೂ ಜನಸಂಖ್ಯೆ ನಿಯಂತ್ರಣದತ್ತ ಭಾರತೀಯರು ಗಮನ ಹರಿಸಿಲ್ಲ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಭಾರತವು ಜನಸಂಖ್ಯೆ ತಲಾ ಭೂಮಿ ಲಭ್ಯತೆ ಮತ್ತು ಆರೋಗ್ಯ ಸೌಲಭ್ಯಗಳಿಗೆ ಸಂಬಂಧಿಸಿದ ಮಹತ್ವದ ಸವಾಲುಗಳನ್ನು ಎದುರಿಸುತ್ತಿದೆ ಎಂದರು.
ತುರ್ತು ಪರಿಸ್ಥಿತಿ ಕಾಲದಿಂದಲೂ ನಾವು ಭಾರತೀಯರು ಜನಸಂಖ್ಯಾ ನಿಯಂತ್ರಣಕ್ಕೆ ಸಾಕಷ್ಟು ಗಮನ ಹರಿಸಿಲ್ಲ. ಇದು ನಮ್ಮ ದೇಶವನ್ನು ಸುಸ್ಥಿರಗೊಳಿಸುವಲ್ಲಿ ಅಪಾಯವನ್ನು ಉಂಟುಮಾಡುತ್ತದೆ ಎಂದು ಹೇಳಿದರು.
ಯುಎಸ್, ಬ್ರೆಜಿಲ್ ಮತ್ತು ಚೀನಾ ದೇಶಗಳಿಗೆ ಹೋಲಿಸಿದರೆ ಅವುಗಳು ಹೆಚ್ಚಿನ ಭೂಮಿ ಲಭ್ಯತೆ ಹೊಂದಿವೆ. ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದು ನಿಜವಾದ ವೃತ್ತಿಪರನ ಜವಾಬ್ದಾರಿಯಾಗಿದೆ.
ಒಂದು ತಲೆಮಾರು ಮುಂದಿನವರ ಬದುಕನ್ನು ಹಸನಾಗಿಸಲು ಹಲವಾರು ತ್ಯಾಗಗಳನ್ನು ಮಾಡಬೇಕು. ನನ್ನ ಪ್ರಗತಿಗಾಗಿ ನನ್ನ ತಂದೆ-ತಾಯಿ, ಒಡಹುಟ್ಟಿದವರು ಮತ್ತು ಶಿಕ್ಷಕರು ಗಣನೀಯ ತ್ಯಾಗ ಮಾಡಿದ್ದಾರೆ ಎಂದರು.
ಜನಸಂಖ್ಯಾ ನಿಯಂತ್ರಣದತ್ತ ನಾವು ಮಹತ್ವದ ಹೆಜ್ಜೆ ಇಡಬೇಕು. ಜನಸಂಖ್ಯೆ ನಿಯಂತ್ರಣಕ್ಕೆ ನಾವು ಸಹ ಕೈಜೋಡಿಸಬೇಕು ಎಂದು ಕರೆಕೊಟ್ಟರು.