Mysore
19
overcast clouds
Light
Dark

ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಹಿಡಿದು ಸಂಸತ್‌ ಪ್ರವೇಶಿಸಿದ ʼಇಂಡಿಯಾʼ ನಾಯಕರು

ನವದೆಹಲಿ: 18 ನೇ ಲೋಕಸಭೆಯ ಮೊದಲ ಅಧಿವೇಶನದ ಇಂದು(ಜೂ.24) ಆರಂಭವಾಗಿದೆ. ಈ ಅಧಿವೇಶನಕ್ಕೆ ಇಂಡಿಯಾ ಮೈತ್ರಿಕೂಟದ ನಾಯಕರು ಸಂವಿಧಾನ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಬಿಜೆಪಿ ಸಂವಿಧಾನದಕ್ಕೆ ಅಗೌರವ ತೋರುತ್ತಿದೆ. ʼಇಂಡಿಯಾʼ ಸಂವಿಧಾನವನ್ನು ರಕ್ಷಿಸುತ್ತದೆ ಎಂಬ ಘೋಷಣೆಗಳೊಂದಿಗೆ ಸಂಸತ್‌ ಪ್ರವೇಶಿಸಿದರು.

ಈ ಮೂಲಕ ಇಂಡಿಯಾ ಮೈತ್ರಿಕೂಟವು ಒಗ್ಗಟ್ಟು ಪ್ರದರ್ಶಿಸಿ, ಸಂವಿಧಾನದ ರಕ್ಷಣೆಯ ಹೊಣೆ ನಮ್ಮದು, ನಾವು ಸಂವಿಧಾನ ಉಳಿಸುತ್ತೇವೆ ಎಂದು ಸಾರಿ ಹೇಳಿದೆ. ಈ ವೇಳೆ ಕಾಂಗ್ರೆಸ್‌ ನಾಯಕ ಕೆ.ಸಿ ವೇಣುಗೋಪಾಲ್‌ ಇಂಡಿಯಾದ ನಾಯಕರನ್ನು ʼಪ್ರಜಾಪ್ರಭುತ್ವದ ರಕ್ಷಕರುʼ ಎಂದು ಕರೆದರು. ಈ ವೇಳೆ ಇಂಡಿಯಾದ ಎಲ್ಲಾ ನಾಯಕರು ಸಂವಿಧಾನದ ಪುಸ್ತಕವನ್ನು ಹಿಡಿದುಕೊಂಡಿದ್ದರು.

ಸಂವಿಧಾನ ಉಳಿಸಲು ಜನರು ವಿರೋಧ ಪಕ್ಷಗಳನ್ನು ಬೆಂಬಲಿಸಿದ್ದಾರೆ ಎನ್ನುವುದು ಈ ಬಾರಿಯ ಚುನಾವಣಾ ಫಲಿತಾಂಶಗಳು ತೋರಿಸುತ್ತವೆ ಎಂದು ಇಂಡಿಯಾ ನಾಯಕರ ಹೇಳಿದರು.

ಈ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ಅವರು ಸಂವಿಧಾನ ಒಡೆಯಲು ಯತ್ನಿಸಿದ್ದಾರೆ, ಅದಕ್ಕಾಗಿಯೇ ಇಂಡಿಯಾ ನಾಯಕರು ಇಂದು ಒಗ್ಗೂಡಿ ಸಂವಿಧಾನ ವಿರೋಧಿಗಳಿಗೆ ಎಚ್ಚರಿಕೆ ನೀಡಿದೆ. ಜೊತೆಗೆ ಮೋದಿಜಿ ಅವರು ಸಂವಿಧಾನ ಪ್ರಕಾರ ಆಡಳಿತ ನಡೆಸಬೇಕು ಎಂದು ತೋರಿಸಲು ಬಯಸುತ್ತೇವೆ ಎಂದರು.