ನವದೆಹಲಿ: ಭಾರತ ದೇಶವು ಹಿಂದೂ ರಾಷ್ಟ್ರವಲ್ಲ ಎಂಬುದನ್ನು ಈ ಬಾರಿಯ ಸಾರ್ವತ್ರಿಕ ಚುನಾಣಾ ಫಲಿತಾಂಶ ಸಾಭೀತುಪಡಿಸಿದೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಹೇಳಿದ್ದಾರೆ.
ವಿದೇಶದಿಂದ ಭಾರತಕ್ಕೆ ಹಿಂತಿರುಗಿದ ವೇಳೆ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಈ ಹಿಂದೆ ಇದ್ದ ವಿಚಾರಣೆ ಇಲ್ಲದೆ ಜನರನ್ನು ಜೈಲಿಗೆ ಹಾಕುವುದು. ಬಡವರು-ಶ್ರೀಮಂತರ ನಡುವಿನ ಅಂತರವನ್ನು ಹೆಚ್ಚಿಸುವ ಕೆಲವು ಘಟನೆಗಳು ಮುಂದುವರೆಯುತ್ತಿದೆ. ಇದು ನಿಲ್ಲಬೇಕು ಪ್ರತಿ ಚುನಾವಣೆ ನಂತರ ದೇಶ ಒಂದೊಂದು ಬದಲಾವಣೆಯನ್ನು ಬಯಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಹೊಸ ಸಂಪುಟದ ಬಗ್ಗೆ ಮಾತನಾಡಿ, ಮಹತ್ತರವಾದ ಯಾವುದೇ ಬದಲಾವಣೆಗಳು ಆಗಿಲ್ಲ. ಹಿಂದೆ ಇದ್ದವರೆ ಈಗಲೂ ಮುಂದುವರೆದಿದ್ದಾರೆ. ರಾಜಕೀಯವಾಗಿ ಪ್ರಬಲರಾಗಿರುವವರು ಪ್ರಬಲರಾಗಿಯೇ ಮುಂದುವರೆದಿದ್ದಾರೆ ಎಂದರು.
ರಾಮಮಂದಿರ ನಿರ್ಮಿಸಿ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಸೋತ ಬಗ್ಗೆ ಪ್ರತಿಕ್ರಿಯಿಸಿ, ತುಂಬಾ ಹಣ ವ್ಯಯಿಸಿ ರಾಮಮಂದಿರ ನಿರ್ಮಿಸಿ ಆಮೂಲಕ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಬಿಂಬಿಸುವ ಪ್ರಯತ್ನ ನಡೆಯಿತು. ಭಾರತ ಒಂದು ಜಾತ್ಯಾತೀತ ರಾಷ್ಟ್ರವಾಗಿದ್ದು, ಅದರ ನೈಜ್ಯ ಗುರುತನ್ನು ಬದಲಿಸಲು ಹಲವು ಪ್ರಯತ್ನಗಳು ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.





