ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವೆ ದಾಳಿ ಮುಂದುವರಿದಿರುವ ಬೆನ್ನಲ್ಲೇ ಮೂರು ಸೇನಾ ಪಡೆ ಮುಖ್ಯಸ್ಥರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ.
ಪಾಕ್ ಮೇಲೆ ಭಾರತೀಯ ಸೇನೆ ದಾಳಿಯನ್ನು ತೀವ್ರಗೊಳಿಸಿದ್ದು, ಪಾಕಿಸ್ತಾನ ಗಢ ಗಢ ನಡುಗುವಂತೆ ಮಾಡಿದೆ. ಪಾಕಿಸ್ತಾನ ಯಾವ ರೀತಿಯಲ್ಲೂ ಊಹಿಸದ ಹಾಗೆ ಭಾರತೀಯ ಸೇನೆ ದಾಳಿ ಮುಂದುವರಿಸಿದ್ದು, ಪಾಕಿಸ್ತಾನ ಪತರುಗುಟ್ಟುವಂತೆ ಮಾಡಿದೆ.
ಈ ಬೆನ್ನಲ್ಲೇ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಮೂರು ಸೇನಾಪಡೆಗಳ ಮುಖ್ಯಸ್ಥರು ಭೇಟಿ ನೀಡಿದ್ದು, ಮೋದಿ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇಡಿಎಸ್ ಅನಿಲ್ ಚೌಹಾಣ್ ಸಹ ಹಾಜರಿದ್ದರು.
ಇದನ್ನೂ ಓದಿ:- ಪಾಕಿಸ್ತಾನ ಒಂದು ಖಾಲಿ ಡಬ್ಬ ಇದ್ದಂಗೆ: ಸಚಿವ ಜಮೀರ್ ಅಹಮ್ಮದ್ ಖಾನ್
ಸಭೆಯಲ್ಲಿ ಪಾಕ್ ಜೊತೆಗಿನ ಸಂಘರ್ಷದ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ದಾಳಿ ಕುರಿತು ಪ್ರಧಾನಿ ನರೇಂದ್ರ ಮೋದಿ ಸೇನಾಪಡೆ ಮುಖ್ಯಸ್ಥರ ಜೊತೆ ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನು ಪಾಕ್ ವಿರುದ್ಧ ಭಾರತದ ಮುಂದಿನ ಹೆಜ್ಜೆ ಏನು ಎನ್ನುವುದು ತೀವ್ರ ಕೂತೂಹಲ ಮೂಡಿಸಿದೆ. ಆದರೆ ಪಾಕ್ ಶರಣಾಗುವವರೆಗೂ ಭಾರತ ಯುದ್ಧ ನಿಲ್ಲಿಸಲ್ಲ ಎಂದು ಹೇಳಲಾಗುತ್ತಿದೆ.





