Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಜನತೆಗೆ ಮತ್ತೊಂದು ಶಾಕ್:‌ ಇನ್ಮುಂದೆ ಮೆಡಿಸನ್‌ಗಳ ಬೆಲೆಯೂ ದುಬಾರಿ

ನವದೆಹಲಿ: ದೇಶದಲ್ಲಿ ಈಗಾಗಲೇ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದರ ಜೊತೆಗೆ ಹಲವು ಮೆಡಿಸನ್‌ಗಳ ಬೆಲೆಯನ್ನು ಸಹ ಏರಿಕೆ ಮಾಡಲಾಗಿದೆ.

ಈ ಔಷಧಿಗಳಲ್ಲಿ ಅಸ್ತಮಾ, ಕ್ಷಯ ಹಾಗೂ ಮಾನಸಿಕ ಆರೋಗ್ಯ ಸೇರಿದಂತೆ ಹಲವು ರೋಗಗಳಿಗೆ ಚಿಕಿತ್ಸೆ ನೀಡುವ ಔಷಧಿಗಳು ಸೇರಿವೆ ಎನ್ನಲಾಗಿದೆ.

ಈ ಮೂಲಕ ಅನಾರೋಗ್ಯ ಸಮಸ್ಯೆಯನ್ನು ಎದುರಿಸುವುದಕ್ಕಿಂತ, ಆಸ್ಪತ್ರೆ ಹಾಗೂ ಔಷಧಿಗಳಿಗೆ ಖರ್ಚು ಮಾಡುವ ವೆಚ್ಚವನ್ನು ನೋಡಿ ಭಯ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಸ್ತಮಾ, ಗ್ಲುಕೋಮಾ, ಥಲಸ್ಸೇಮಿಯಾ, ಕ್ಷಯ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ನೀಡುವ ಔಷಧಿ ಬೆಲೆಯನ್ನು ಬರೋಬ್ಬರಿ ಶೇಕಡಾ 50ರಷ್ಟು ಹೆಚ್ಚಳ ಮಾಡುವುದಕ್ಕೆ ಅನುಮತಿ ನೀಡಲಾಗಿದೆ.

ಔಷಧಿ ತಯಾರಿಕೆಯಲ್ಲಿ ಬಳಸುವ ಪ್ರಮುಖ ಪದಾರ್ಥಗಳ ಬೆಲೆ ಹೆಚ್ಚಳವಾಗಿದ್ದು, ಇದರ ಜೊತೆಗೆ ಉತ್ಪಾದನೆ ವೆಚ್ಚವೂ ಅಧಿಕವಾಗಿದೆ. ಇದೇ ಔಷಧಿಗಳ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

Tags: