Mysore
20
few clouds

Social Media

ಬುಧವಾರ, 21 ಜನವರಿ 2026
Light
Dark

ಭಾರತ-ಪಾಕ್ ಸಂಘರ್ಷ ತಪ್ಪಿಸಿದ್ದು ನಾನೆ : ಪುಟಿನ್ ಭೇಟಿ ಬಳಿಕ ಟ್ರಂಪ್ ಪುನರುಚ್ಚಾರ

ವಾಷಿಂಗ್ಟನ್ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಶೃಂಗಸಭೆಯ ದಿನದಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಹೇಳಿದ್ದಾರೆ. ಅಲ್ಲದೆ ಭಾರತ, ರಷ್ಯಾದಿಂದ ತೈಲ ಖರೀದಿಯ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

ಅಮೆರಿಕದ ಯಾವುದೇ ಮಧ್ಯಸ್ಥಿಕೆ ಇಲ್ಲದೆ ಭಾರತ ಮತ್ತು ಪಾಕಿಸ್ತಾನ ಮಿಲಿಟರಿಗಳ ನಡುವಿನ ನೇರ ಮಾತುಕತೆಯ ನಂತರ ಯುದ್ಧ ನಿಲ್ಲಿಸಲಾಯಿತು ಎಂದು ಹೊಸದಿಲ್ಲಿ ಸಮರ್ಥಿಸಿಕೊಳ್ಳುತ್ತಿದೆ.

‘ಭಾರತ, ಪಾಕಿಸ್ತಾನ ಯುದ್ಧ ಸೇರಿದಂತೆ ನಾನು ಐದು ಯುದ್ಧಗಳನ್ನು ಅವುಗಳ ಅಂತ್ಯದವರೆಗೆ ಮಾತುಕತೆ ನಡೆಸಿದ್ದೇನೆ ಮತ್ತು ಆ ಯುದ್ಧಗಳು ಕಠಿಣವಾಗಿದ್ದವು…ʼ ಎಂದು ಶುಕ್ರವಾರ ಅಲಾಸ್ಕಾದ ಆಂಕಾರೇಜ್‌ನಲ್ಲಿ ಪುಟಿನ್ ಅವರೊಂದಿಗೆ ನಡೆದ ಉನ್ನತ ಮಟ್ಟದ ಶೃಂಗಸಭೆಯ ಬಳಿಕ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ.

ಈ ಮಧ್ಯೆ, ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಯಾವುದೇ ಒಪ್ಪಂದವಿಲ್ಲದೆ ಉಭಯ ನಾಯಕರ ನಡುವಿನ ಸಭೆ ಅಂತ್ಯಗೊಂಡಿದೆ.

‘ನೀವು ಭಾರತ ಮತ್ತು ಪಾಕಿಸ್ತಾನವನ್ನು ಒಮ್ಮೆ ನೋಡಿ. ಅವರು ವಿಮಾನಗಳನ್ನು ಗಾಳಿಯಲ್ಲಿ ಹೊಡೆದುರುಳಿಸಿದ್ದರು. ಆರರಿಂದ ಏಳು ವಿಮಾನಗಳು ಕೆಳಕ್ಕುರುಳಿದ್ದವು. ಅವರು ಪರಮಾಣು ಯುದ್ಧಕ್ಕೂ ಮುಂದಾಗಿದ್ದರು. ಆದರೆ ನಾನು ಸಮಸ್ಯೆಯನ್ನು ಬಗೆಹರಿಸಿದೆನುʼ ಎಂದು ಟ್ರಂಪ್ ಹೇಳಿದ್ದಾರೆ.

ಯುದ್ಧಗಳು ‘ತುಂಬಾ ಕೆಟ್ಟವು‘ ಎಂದು ಒತ್ತಿ ಹೇಳಿದ ಟ್ರಂಪ್, ‘ಅವುಗಳನ್ನು ಕೊನೆಗೊಳಿಸುವ, ಜನರನ್ನು ಒಟ್ಟುಗೂಡಿಸುವ ಸಾಮರ್ಥ್ಯʼ ತನಗೆ ಇದೆ ಎಂದು ತೋರುತ್ತದೆ. ಇದಕ್ಕಾಗಿ ನಾನು ‘ಯುನೈಟೆಡ್ ಸ್ಟೇಟ್ಸ್‌ನ ಶಕ್ತಿಯನ್ನುʼ ಬಳಸುತ್ತಿದ್ದೇನೆ ಎಂದು ಟ್ರಂಪ್ ತಿಳಿಸಿದ್ದಾರೆ.

Tags:
error: Content is protected !!