ನವದೆಹಲಿ: ಸರಳ ಬಹುಮತ ಪಡೆದಿರುವ ಎನ್‌ಡಿಎ ಸರ್ಕಾರ ರಚಿಸುವತ್ತ ತನ್ನ ಗಮನ ಕೇಂದ್ರಿಕರಿಸಿದೆ. ಎನ್‌ಡಿಎ ನಾಯಕರಾಗಿ ಹಂಗಾಮಿ ಪ್ರಧಾನಿ ನರೇಂದ್ರ ಮೋದಿ ಅವರು ಆಯ್ಕೆಯಾಗಿ, ಜೂನ್ 8 ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇತ್ತ ಇಂಡಿಯಾ ಒಕ್ಕೂಟ ಸರ್ಕಾರ ರಚಿಸಬೇಕೋ ಅಥವಾ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಸಮರ್ಥವಾಗಿ ನಿಭಾಯಿಸಬೇಕೋ ಎಂಬ ಗೊಂದಲದಲ್ಲೇ ಇದೆ. ಈ ನಡುವೆ ಶಿವಸೇನಾ ಸದಸ್ಯ ಸಂಜಯ್ ರಾವತ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ ಮೋದಿ ಅವರ ಸರ್ಕಾರ ರಚನೆಯಾಗಲ್ಲ. ಬದಲಿಗೆ ಬೇರೆ ಸರ್ಕಾರ ರಚನೆ ಯಾಗುತ್ತದೆ. ಮೋದಿ ಸರ್ಕಾರ ರಚನೆ ಆದರೂ ಕೂಡ ಅದು ಹೆಚ್ಚು ದಿನ ಉಳಿಯಲ್ಲ ಎಂದು ಶಿವಸೇನಾ ಸದಸ್ಯ ಸಂಜಯ್ ರಾವತ್ ಹೇಳಿದ್ದಾರೆ.