ನವದೆಹಲಿ: ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.
ಈ ಕುರಿತು ನವದೆಹಲಿಯಲ್ಲಿ ಇಂದು ಮಾತನಾಡಿದ ಅವರು, ಪಕ್ಕದ ರಾಜ್ಯದ ಒತ್ತಡಕ್ಕೆ ಮಣಿದು ಸರ್ಕಾರ ಮನೆ ನೀಡುತ್ತಿದೆ. ಇದು ರಾಜ್ಯ ಸರ್ಕಾರ ದಡ್ಡತನದ ಪರಮಾವಧಿ. 2ನೇ ಅವಧಿಗೆ ಸಿಎಂ ಆದ ಬಳಿಕ ಸಿದ್ದರಾಮಯ್ಯ ಬಹಳ ಬದಲಾವಣೆಯಾಗಿದ್ದಾರೆ. ಮೊದಲಿನ ಸಿದ್ದರಾಮಯ್ಯ ಅಲ್ಲ. ಈಗ ಅವರು ತುಂಬಾ ಬದಲಾಗಿದ್ದಾರೆ. ವಲಸೆ ಜನರಿಗೆ ಕೂಡಲೇ ಮನೆ ನೀಡಲು ಸಕಾರಣವೇನು? ನಮ್ಮ ವಿರುದ್ಧ ಮಾತನಾಡಲು ಕೇರಳ ಸರ್ಕಾರಕ್ಕೆ ಏನು ನೈತಿಕತೆ ಇದೆ? ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ ಈವರೆಗೂ ಮನೆ ನೀಡಿಲ್ಲ. ಅಲ್ಲಿನ ಜನರ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ನೋಡಿಲ್ಲ. ಕೇರಳದಲ್ಲಿ ಚುನಾವಣೆ ಇದೆ ಅಂತಾ ಈ ರೀತಿ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.





