ನವದೆಹಲಿ: ರಾಜ್ಯದಲ್ಲಿ ನಡೆದಿದೆ ಎನ್ನಲಾಗಿರುವ ಹನಿಟ್ರ್ಯಾಪ್ ವಿಚಾರ ದೇಶದಲ್ಲಿ ಭಾರೀ ಸುದ್ದಿಯಾಗಿದ್ದು, ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ರಾಜಕಾರಣಿಗಳು ಹಾಗೂ ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಆಗಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಜಾರ್ಖಂಡ್ ರಾಜ್ಯದ ವಕೀಲ ವಿನಯ್ ಕುಮಾರ್ ಸಿಂಗ್ ಎಂಬುವವರು ಸುಪ್ರೀಂಕೋರ್ಟ್ ಪಿಐಎಲ್ ಸಲ್ಲಿಕೆ ಮಾಡಿದ್ದರು.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ನೀವು ಜಾರ್ಖಂಡ್ ರಾಜ್ಯದವರು. ಕರ್ನಾಟಕ ರಾಜ್ಯದ ಬಗ್ಗೆ ನಿಮಗೇನು ಸಂಬಂಧ?. ನ್ಯಾಯಾಧೀಶರು ಯಾಕೆ ಹನಿಟ್ರ್ಯಾಪ್‌ಗೆ ಒಳಗಾಗುತ್ತಾರೆ. ಅದನ್ನು ಜಡ್ಜ್‌ಗಳು ನೋಡಿಕೊಳ್ಳುತ್ತಾರೆ ಎಂದು ವಕೀಲ ವಿನಯ್ ಕುಮಾರ್ ಸಿಂಗ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಈ ಮೂಲಕ ಹನಿಟ್ರ್ಯಾಪ್ ತನಿಖೆ ನಡೆಸುವಂತೆ ಅರ್ಜಿ ಸಲ್ಲಿಸಿದ್ದ ವಕೀಲ ವಿನಯ್ ಕುಮಾರ್‌ರಿಗೆ ತೀವ್ರ ಮುಖಭಂಗವಾಗಿದೆ.





