Mysore
29
clear sky

Social Media

ಶುಕ್ರವಾರ, 06 ಫೆಬ್ರವರಿ 2026
Light
Dark

ಕೇಂದ್ರ ಬಜೆಟ್‌-2026: ಬೆಂಗಳೂರಿಗೆ ಹೈಸ್ಪೀಡ್‌ ರೈಲು ಕಾರಿಡಾರ್‌ ಘೋಷಣೆ

ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಂದು 2026-27ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆ ಮಾಡಿದರು. ಇದು ಅವರ 9ನೇ ಬಜೆಟ್‌ ಆಗಿದೆ.

ಬಜೆಟ್‌ನಲ್ಲಿ ಹೊಸ ಏಳು ಹೈಸ್ಪೀಡ್‌ ರೈಲು ಮಾರ್ಗಗಳನ್ನು ಘೋಷಣೆ ಮಾಡಿದ ಕೇಂದ್ರ ಸರ್ಕಾರವು, ಬೆಂಗಳೂರಿಗೆ ಹೈಸ್ಪೀಡ್‌ ರೈಲು ಕಾರಿಡಾರ್‌ ಘೋಷಿಸಿದೆ.

ಬೆಂಗಳೂರು-ಹೈದರಾಬಾದ್‌, ಬೆಂಗಳೂರು-ಚೆನ್ನೈಗೆ ಹೈಸ್ಪೀಡ್‌ ರೈಲು ಘೋಷಣೆಯಾಗಿದೆ. ದೆಹಲಿ-ವಾರಣಾಸಿ ಮಾರ್ಗದಲ್ಲೂ ಹೈಸ್ಪೀಡ್‌ ರೈಲು ಘೋಷಣೆ ಮಾಡಲಾಗಿದೆ.

ಇನ್ನು ಎಐ ತಂತ್ರಜ್ಞಾನದ ಅಭಿವೃದ್ಧಿಗಾಗಿ ಕೇಂದ್ರ ವಿಶೇಷ ಆದ್ಯತೆ ನೀಡಿದ್ದು, ವಿದ್ಯೆಯಿಂದ ಉದ್ಯೋಗ ಸೃಷ್ಟಿಗೆ ವಿಶೇಷ ಸಮಿತಿ ರಚನೆ ಮಾಡಲಾಗಿದೆ. ಉದ್ಯೋಗ ಸೃಷ್ಟಿಗಾಗಿ ಕೇಂದ್ರ ಸರ್ಕಾರದಿಂದ ವಿಶೇಷ ಯೋಜನೆ ಘೋಷಣೆಯಾಗಿದೆ.

Tags:
error: Content is protected !!