Mysore
18
broken clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಭಾರತ-ಪಾಕಿಸ್ತಾನ ಸಂಘರ್ಷ : ಸೇನಾ ಪಡೆಗಳ ಜಂಟಿ ಪತ್ರಿಕಾಗೋಷ್ಠಿಯ ಮುಖ್ಯಂಶ ಇಲ್ಲಿವೆ

ಹೊಸದಿಲ್ಲಿ : ಪಾಕಿಸ್ತಾನ ತನ್ನ ಎಲ್ಲಾ ಸೇನೆಯನ್ನು ಗಡಿಯಲ್ಲಿ ನೀಯೋಜಿಸುತ್ತಿದೆ. ಉದ್ವಿಗ್ನ ಹೆಚ್ಚಿಸಲು ಪಾಕ್‌ ಪಡೆಗಳು ಯತ್ನಿಸುತ್ತಿದ್ದು, ಪಾಕ್‌ ದಾಳಿಗೆ ತಕ್ಕಂತೆ ಭಾರತ ಪ್ರತಿಕ್ರಿಯಿಸಿದೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಶ್ರ, ಕರ್ನಲ್‌ ಸೋಫಿಯಾ ಖುರೇಷಿ ಮತ್ತು ವಿಂಗ್‌ ಕಮಾಂಡರ್‌ ವ್ಯೋಮೊಕಾ ಸಿಂಗ್‌ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು ಹೀಗಿವೆ…

ಭಾರತದ ಏರ್‍ಬೇಸ್, ಎಸ್- 400 ಕ್ಷಿಪಣಿ ರಕ್ಷಣಾ ವ್ಯವಸ್ಥೆ (ಎಸ್-400 ಕ್ಷಿಪಣಿ) ಸುರಕ್ಷಿತವಾಗಿದ್ದು, ಯಾವುದೇ ಹಾನಿಯಾಗಿಲ್ಲ.
ಸುದರ್ಶನ ಚಕ್ರ ಎಂದು ಕರೆಯಲ್ಪಡುವ ಎಸ್-400 ಏರ್ ಡಿಫೆನ್ಸ್ ಸಿಸ್ಟಂ ಕ್ಷಿಪಣಿಗೆ ಹಾನಿಯಾಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿಗಳು ಆಧಾರ ರಹಿತ, ಸುಳ್ಳು ಸುದ್ದಿ.

ಗುರುವಾರ ರಾತ್ರಿ ಪಾಕಿಸ್ತಾನ ಆವಂತಿಪೋರಾ, ಶ್ರೀನಗರ, ಜಮು, ಪಠಾಣ್‍ಕೋಟ್, ಅಮೃತಸರ, ಲುಧಿಯಾನ ಮತ್ತು ಭುಜ್‍ನಲ್ಲಿರುವ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲು ಮುಂದಾಗಿತ್ತು. ಆದರೆ ಈ ಎಲ್ಲ ಕ್ಷಿಪಣಿಗಳನ್ನು ಎಸ್-400 ಏರ್ ಡಿಫ್ಸೆನ್ಸ್ ಸಿಸ್ಟಂ ಕ್ಷಣ ಮಾತ್ರದಲ್ಲೇ ಹೊಡೆದುರುಳಿಸಿತ್ತು.

ಪಾಕ್‌ ಕ್ರಮಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲಾಗಿದೆ. ಧಾರ್ಮಿಕ ಸ್ಥಳಗಳ ಮೇಲೆ ಭಾರತ ಕ್ಷಿಪಣಿ ದಾಳಿ ಎಂಬುದು ಹಾಸ್ಯಾಸ್ಪದ, ಪಾಕ್‌ ಪಡೆ ನಡೆಸಿದ ಶೆಲ್‌ ದಾಳಿಯಲ್ಲಿ ಒರ್ವ ಅಧಿಕಾರಿ ಹುತಾತ್ಮ, ಭಾರತದ ವಾಯುನೆಲೆಗೆ ಯಾವುದೇ ಹಾನಿಯಾಗಿಲ್ಲ ಎನ್ನುವುದಕ್ಕೆ ಸುದ್ದಿಗೋಷ್ಠಿಯಲ್ಲಿ ಸದ್ಯದ ಚಿತ್ರಗಳನ್ನು ತೋರಿಸಲಾಯಿತು.

ಇದನ್ನೂ ಓದಿ:- ಸೂಕ್ಷ್ಮ ಪ್ರದೇಶದಲ್ಲಿ ಸಿಬ್ಬಂದಿ ನಿಯೋಜನೆ ; ಗೃಹ ಸಚಿವ ಪರಮೇಶ್ವರ್‌ 

ಪಾಕಿಸ್ತಾನವು ಉಧಂಪುರ, ಪಠಾಣ್‍ಕೋಟ್ ಮತ್ತು ಭಟಿಂಡಾದಲ್ಲಿನ ಭಾರತೀಯ ವಾಯುನೆಲೆಗಳು ಮತ್ತು ಇತರ 23 ಭಾರತೀಯ ನಗರಗಳ ಮೇಲೆ ದಾಳಿ ಮಾಡಿತ್ತು. ಕ್ಷಿಪಣಿ ಡ್ರೋನ್ ದಾಳಿಗಳನ್ನು ನಾವು ತಟಸ್ಥಗೊಳಿಸಿದ್ದೇವೆ.

ಪಾಕ್ ಸೇನೆ ಭಾರತದ ನಾಗರಿಕರನ್ನು, ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ. ಪ್ರಯಾಣಿಕ ವಿಮಾನವನ್ನು ಗುರಾಣಿಯನ್ನಾಗಿ ಬಳಸಿಕೊಂಡು ಭಾರತದ ಮೇಲೆ ದಾಳಿ ನಡೆಸುತ್ತಿದೆ.

ಸೇನಾ ಮೂಲಸೌರ್ಕರ್ಯಗಳಿಗೆ ಭಾರಿ ಹಾನಿಯಾಗಿದೆ ಎಂಬ ಪಾಕ್‌ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಪತ್ರಿಕಾಗೋಷ್ಠಿಯಲ್ಲಿ ಖುರೇಷಿ ಪ್ರಾತಿಪಾದಿಸಿದರು.

Tags:
error: Content is protected !!