ಕೇದಾರನಾಥ: ತಾಂತ್ರಿಕ ದೋಷದಿಂದಾಗಿ ತುರ್ತು ಭೂಸ್ಪರ್ಶ ಮಾಡಿದ್ದ ಹೆಲಿಕಾಪ್ಟರ್‌ನ್ನು ಹೊತ್ತೊಯ್ಯುವ ವೇಳೆ ಜಾರಿ ಬಿದ್ದ ಎಲಿಕಾಪ್ಟರ್ ಪತವಾಗಿರುವ ಘಟನೆ ಉತ್ತರಖಂಡದ ಕೇದಾರನಾಥದಲ್ಲಿ ನಡೆದಿದೆ.
ತುರ್ತು ಭೂಸ್ಪರ್ಶ ಮಾಡಿದ್ದ ಹೆಲಿಕಾಪ್ಟರ್‌ನ್ನು ಎಂಎ-17 ಹೆಲಿಕಾಪ್ಟರ್ ಸಹಾಯದಿಂದ ದುರಸ್ತಿಗಾಗಿ ಗೌಚಾರ್ ಹೆಲಿಪ್ಯಾಡ್‌ಗೆ ಸಾಗಿಸಲಾಗುತ್ತಿತ್ತು. ಈ ಏರ್‌ಲಿಫ್ಟ್ ವೇಳೆ ಕಟ್ಟಲಾಗಿದ್ದ ಟೋಯಿಂಗ್ ಹಗ್ಗ ಹರಿದ ಪರಿಣಾಮವಾಗಿ ಜಾರಿ ಬಿದ್ದ ಹೆಲಿಕಾಪ್ಟರ್ ಮಂದಾಕಿನಿ ನದಿಯ ಬಳಿ ಪತವಾಗಿದೆ. ಆದರೆ ಇದರಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋವನ್ನು ಖಾಸಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
https://x.com/PTI_News/status/1829728153473831180
ಎಸ್‌ಡಿಆರ್‌ಎಫ್ ಹೇಳಿರುವಂತೆ, ಇಂದು ಕೇದಾರನಾಥ ಹೆಲಿಪ್ಯಾಡ್‌ನಿಂದ ಗೋಚಾರ್ ಹೆಲಿಪ್ಯಾಡ್‌ಗೆ ಮತ್ತೊಂದು ಹೆಲಿಕಾಪ್ಟರ್‌ನಿಂದ ಸಾಗಿಸುವ ವೇಳೆ ಖಾಸಗಿ ಕಂಪನಿಯ ದೋಷಯುಕ್ತ ಹೆಲಿಕಾಪ್ಟರ್ ಥಾರು ಕ್ಯಾಂಪ್ ಬಳಿಯ ಲಿಂಚೋಲಿ ಎಂಬಲ್ಲಿ ನದಿಗೆ ಬಿದ್ದಿದೆ ಎಂದು ಎಸ್‌ಡಿಆರ್‌ಎಫ್ ರಕ್ಷಣಾ ತಂಡವು ಪೊಲೀಸ್ ಪೋಸ್ಟ್ ಲಿಂಚೋಲಿ ಮೂಲಕ ಮಾಹಿತಿ ಪಡೆದಿದೆ. ಎಸ್‌ಡಿಆರ್‌ಎಫ್ ತಂಡವು ಸ್ಥಳಕ್ಕೆ ಧಾವಿಸಿದ್ದು, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಎಸ್‌ಡಿಆರ್‌ಎಫ್ ತಂಡವು ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಶೋಧ ನಡೆಸುತ್ತಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಎಎನ್‌ಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.