Mysore
23
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಲೋಕಸಭೆಯಲ್ಲಿ ಕಾಂಗ್ರೆಸ್‌ ಉಪನಾಯಕನಾಗಿ ಗೌರವ್‌ ಗೊಗೋಯ್‌ ನೇಮಕ

ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪನಾಯಕನಾಗಿ ಗೌರವ್‌ ಗೊಗೋಯ್‌ ನೇಮಕಗೊಂಡಿದ್ದಾರೆ.

ರಾಹುಲ್‌ ಗಾಂಧಿ ವಿರೋಧ ಪಕ್ಷದ ನಾಯಕರಾಗಿದ್ದು, ಅಸ್ಸಾಂ ಮಾಜಿ ಮುಖ್ಯಮಂತ್ರಿ ಅರುಣ್‌ ಗೊಗೋಯ್‌ ಪುತ್ರ ಗೌರವ್‌ ಗೊಗೋಯ್‌ ಅವರನ್ನು ಉಪ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಮುಂಬರುವ ಮುಂಗಾರು ಅಧಿವೇಶನದಲ್ಲಿ ಪಕ್ಷಕ್ಕೆ ಹೊಸ ಚೈತನ್ಯ ಮೂಡಿಸಲು ಈ ನೇಮಕ ಮಾಡಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. 2020ರಲ್ಲೂ ಕೂಡ ಗೌರವ್‌ ಗೊಗೋಯ್‌ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು.

ಗೌರವ್‌ ಗೊಗೋಯ್‌ ಅಸ್ಸಾಂನ ಜೋರ್ಹತ್‌ ಕ್ಷೇತ್ರದಿಂದ ಲೋಕಸಭಾ ಸಂಸದರಾಗಿದ್ದಾರೆ. ಚುನಾವಣೆಯಲ್ಲಿ 1,44,393 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗೌರವ್‌ ಗೊಗೋಯ್‌ ಅವರು ಸಾಮಾನ್ಯವಾಗಿ ಸಂಸತ್ತಿನಲ್ಲಿ ಕಾಂಗ್ರೆಸ್‌ ಪರವಾಗಿ ಪಕ್ಷದ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ.

ಮುಖ್ಯ ಸಚೇತಕರಾಗಿ ಕೋಡಿಕುನ್ನಿಲ್‌ ಸುರೇಶ್‌ ಆಯ್ಕೆಯಾಗಿದ್ದಾರೆ. ಸಂಸದರಾದ ಮಾಣಿಕ್ಯಂ ಟ್ಯಾಗೋರ್‌ ಮತ್ತು ಎಂ.ಡಿ.ಜವೈದ್‌ ಅವರನ್ನು ಸಚೇತಕರನ್ನಾಗಿ ಮತ್ತು ಕೋಡಿಕುನ್ನಿಲ್‌ ಸುರೇಶ್‌ ಅವರನ್ನು ಮುಖ್ಯ ಸಚೇತಕರಾಗಿ ನೇಮಿಸಲಾಗಿದೆ.

Tags:
error: Content is protected !!