Mysore
28
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ದೇಶದಲ್ಲಿ ಜನಗಣತಿ ಸರ್ವೆ ನಡೆಸಲು ಕೇಂದ್ರ ಸರ್ಕಾರದಿಂದ ಗೆಜೆಟೆಡ್‌ ಅಧಿಸೂಚನೆ ಪ್ರಕಟ

indian population

ನವದೆಹಲಿ: ದೇಶದಲ್ಲಿ ಜನಗಣತಿ ಸರ್ವೆ ನಡೆಸಲು ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.

ಜನಗಣತಿ ನಡೆಸುವ ಅಧಿಸೂಚನೆಯನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸುವ ಒಂದು ದಿನ ಮೊದಲು ಅಂದರೆ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಈ ಕಾರ್ಯದ ಸಿದ್ಧತೆ ಪರಿಶೀಲಿಸಿದರು.

ಜನಸಂಖ್ಯಾ ಗಣತಿಯನ್ನು ಅಕ್ಟೋಬರ್.‌1, 2026 ಹಾಗೂ ಮಾರ್ಚ್.‌1, 2027ರಂದು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಸುಮಾರು 34 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರು ಮತ್ತು 1.3 ಲಕ್ಷ ಜನಗಣತಿ ಕಾರ್ಯಕರ್ತರನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಾಗುವುದು. ಎರಡು ಹಂತಗಳಲ್ಲಿ ಜನಸಂಖ್ಯಾ ಗಣತಿ ನಡೆಯಲಿದ್ದು, ಮಾರ್ಚ್.‌1, 2027ರೊಳಗೆ ಇದು ಮುಕ್ತಾಯಗೊಳ್ಳಲಿದೆ.

Tags:
error: Content is protected !!