Mysore
32
scattered clouds

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ಸಂಗೀತ ವಿ.ವಿ : ವಿವಿಧ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮೈಸೂರು: ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಹಾಗೂ ಹುಬ್ಬಳ್ಳಿಯ ಡಾ.ಗಂಗೂಬಾಯಿ ಹಾನಗಲ್ ಕೇಂದ್ರಕ್ಕೆ 2024-25ನೇ ಶೈಕ್ಷಣಿಕ ಸಾಲಿನಿಂದ ನಡೆಸುವ ಸ್ನಾತಕ, ಸ್ನಾತಕೋತ್ತರ, ಡಿ.ಲಿಟ್, ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಬಿ.ಪಿ.ಎ ಕೋರ್ಸ್ ಗಳಿಗೆ ನೂತನ ಶಿಕ್ಷಣ ನೀತಿ ಅನುಸಾರ ನಾಟಕ ಭರತನಾಟ್ಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕರ್ನಾಟಕ ಶಾಸ್ತ್ರೀಯ ಸಂಗೀತ ತಬಲಾ ಮೃದಂಗ ವೀಣಾ ಪಿಟೀಲು ವಿಷಯಗಳು ಹಾಗೂ ಕನ್ನಡ ಸಂಸ್ಕೃತ ಮತ್ತು ಇಂಗ್ಲೀಷ್ ಭಾಷಾ ಪತ್ರಿಕೆಗಳಿಗೆ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ, ಎಂ.ಪಿ.ಎ ಕೋರ್ಸ್ ಗಳಿಗೆ ನಾಟಕ ಭರತನಾಟ್ಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕರ್ನಾಟಕ ಶಾಸ್ತ್ರೀಯ ಸಂಗೀತ ಕೋರ್ಸ್ ಗಳಿಗೆ ಯಾವುದೇ ವಿಷಯದಲ್ಲಿ ಪದವಿ ಮತ್ತು ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹಾಗೂ ವಿಶ್ವವಿದ್ಯಾಲಯದ ಮೌಖಿಕ ಪರೀಕ್ಷೆಯಲ್ಲಿ ಅರ್ಹತೆ, ಡಿಲೀಟ್ ವಿಷಯಕ್ಕೆ ಫ್ಯಾಕಲ್ಟಿ ಗಾಯನ ಸಂಗೀತ, ಪ್ರದರ್ಶನ ಉಪಕರಣಗಳು, ನೃತ್ಯ, ಪ್ರದರ್ಶಕ ಕಲೆಗಳು ಮತ್ತು ನಾಟಕಗಳಿಗೆ ಸಂಗೀತ ನೃತ್ಯ ನಾಟಕ ಹಾಗೂ ಪ್ರದರ್ಶಕ ಕಲೆಗಳಲ್ಲಿ ಅಧ್ಯಯನ ನಡೆಸಿ ಉನ್ನತ ಮಟ್ಟದ ಪರಿಣಿತಿ, ಒಂದು ವರ್ಷದ ಡಿಪ್ಲೋಮಾ ಕೋರ್ಸ್ ಮತ್ತು ಸಂಜೆ ಕೋರ್ಸ್ ಗಳಿಗೆ ಹಿಂದೂಸ್ತಾನಿ ಸಂಗೀತ ಕರ್ನಾಟಕ ಸಂಗೀತ ಭರತನಾಟ್ಯ ನಾಟಕ ತಬಲ ಮೃದಂಗ ವೀಣೆ ಮತ್ತು ಯೋಗ ವಿಷಯಕ್ಕೆ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ, ಸರ್ಟಿಫಿಕೇಟ್ ಕೋರ್ಸ್ ಹಾಗೂ ಸಂಜೆ ಕೋರ್ಸ್ ಗಳಿಗೆ ಭಕ್ತಿ ಸಂಗೀತ ಸುಗಮ ಸಂಗೀತ ಜಾನಪದ ಸಂಗೀತ ರಂಗ ಸಂಗೀತ ಭರತನಾಟ್ಯ ನಾಟಕ ಹಾರ್ಮೋನಿಯಂ ತಬಲ ಯೋಗ ಹಿಂದೂಸ್ತಾನಿ ಸಂಗೀತ ಕರ್ನಾಟಕ ಸಂಗೀತ ಯಕ್ಷಗಾನ ಗಮಕ ಸಿತಾರ ಒಡಿಸಿ ಕೀಬೋರ್ಡ್ ಕರ್ನಾಟಕ ಇನ್ಸ್ಟ್ರುಮೆಂಟಲ್ ಗಿಟಾರ್ ಕಥಕ್ ವಿಷಯಕ್ಕೆ ಕನ್ನಡದಲ್ಲಿ ಬರೆಯುವ ಮತ್ತು ಓದುವ ಜ್ಞಾನ ಇರಬೇಕು.

ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಬರುವ ಎಲ್ಲಾ ಸ್ನಾತಕೋತ್ತರ/ಡಿಪ್ಲೋಮೋ/ಸರ್ಟಿಫಿಕೇಟ್/ಡಿ.ಲಿಟ್ ಕಾರ್ಯಕ್ರಮಗಳಿಗೆ ಪ್ರವೇಶಾತಿಯನ್ನು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಾಹಕ ವ್ಯವಸ್ಥೆಯ ಪೋರ್ಟಲ್ ಮೂಲಕ ಮಾಡಲಾಗುವುದು. UUCMS ಸಂಬoಧಿಸಿದ ಎಲ್ಲ ಮಾಹಿತಿಯನ್ನು https://uucms.Karnataka.gov.in ನಲ್ಲಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ https://www.musicuniversity.ac.in ವೆಬ್‌ಸೈಟ್ ಹಾಗೂ ದೂ.ಸಂ:0821-2402114 ಅಥವಾ 9480150826 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾ

Tags:
error: Content is protected !!