Mysore
26
overcast clouds

Social Media

ಶನಿವಾರ, 11 ಏಪ್ರಿಲ 2026
Light
Dark

ಇಂದಿನಿಂದ ಟೋಲ್‌ಗಳಲ್ಲಿ ಕ್ಯಾಷ್‌ ಇಲ್ಲ ; ಡಿಜಿಟಲ್‌ ಪಾವತಿ ಮಾತ್ರ.

ಬೆಂಗಳೂರು : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿರ್ಧಾರದಂತೆ, ಇಂದಿನಿಂದ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು (ಕ್ಯಾಷ್) ಪಾವತಿ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇನ್ನು ಮುಂದೆ ಕೇವಲ ಡಿಜಿಟಲ್ ವಿಧಾನಗಳ ಮೂಲಕವೇ ಟೋಲ್ ಶುಲ್ಕ ಪಾವತಿಸಬೇಕಾಗುತ್ತದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಜಾರಿಗೊಳಿಸಿರುವ ಹೊಸ ನಿಯಮದ ಪ್ರಕಾರ, ಫಾಸ್ಟ್‌ಟ್ಯಾಗ್ (FASTag) ಮುಖ್ಯ ಪಾವತಿ ವ್ಯವಸ್ಥೆಯಾಗಿರುತ್ತದೆ. ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ಯುಪಿಐ ಮೂಲಕ ಪಾವತಿಸಬಹುದು. ಆದರೆ ಫಾಸ್ಟ್‌ಟ್ಯಾಗ್ ಇಲ್ಲದಿದ್ದಲ್ಲಿ ಯುಪಿಐ ಪಾವತಿಯು ಸಾಮಾನ್ಯ ಟೋಲ್ ದರಕ್ಕಿಂತ 1.25 ಪಟ್ಟು ಹೆಚ್ಚಾಗಲಿದೆ.

ಟೋಲ್ ಪ್ಲಾಜಾಗಳಲ್ಲಿ ದೀರ್ಘ ಸರತಿ ಸಾಲುಗಳನ್ನು ತಡೆಯುವುದು, ಸಂಚಾರ ಜಾಮ್ ಕಡಿಮೆ ಮಾಡುವುದು, ಡಿಜಿಟಲ್ ಭಾರತದತ್ತ ಇನ್ನಷ್ಟು ಹೆಜ್ಜೆ ಇಡುವುದು, ಟೋಲ್ ಸಂಗ್ರಹವನ್ನು ಪಾರದರ್ಶಕ ಮತ್ತು ತ್ವರಿತಗೊಳಿಸುವುದು
ಈ ನಿಯಮದ ಮುಖ್ಯ ಉದ್ದೇಶವಾಗಿದೆ.

ಹಿಂದಿನಂತೆ ಐಡಿ ಕಾರ್ಡ್ ತೋರಿಸಿ ರಿಯಾಯಿತಿ ಅಥವಾ ವಿನಾಯಿತಿ ಪಡೆಯುವ ವ್ಯವಸ್ಥೆಯೂ ಇನ್ನು ಇರುವುದಿಲ್ಲ ಎಂದು ವರದಿಗಳು ಹೇಳುತ್ತಿವೆ. ಫಾಸ್ಟ್‌ಟ್ಯಾಗ್ ಅನ್ನು ಮುಂಚಿತವಾಗಿ ರೀಚಾರ್ಜ್ ಮಾಡಿಕೊಳ್ಳುವಂತೆ ಅಧಿಕಾರಿಗಳು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.

 

Tags:
error: Content is protected !!