ಕೇರಳ: 2019ರಲ್ಲಿ ಸಮೀಪಿಸಿದ್ದ ಗುಡ್ಡ ಕುಸಿತ ಮತ್ತೊಮ್ಮೆ ವಯನಾಡಿನಲ್ಲಿ ಸಂಭವಿಸಿದೆ. ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಮೇಪ್ಪಾಡಿ ಬಳಿಯ ಚುರ್ಲಾಮಲಾ ಬಳಿ ವಿಪರೀತ ಮಳೆಯಿಂದಾಗಿ ಗುಡ್ಡ ಕುಸಿತ ಸಂಭವಿಸಿದೆ.
ಈ ಗುಡ್ಡ ಕುಸಿತದಲ್ಲಿ ಒಂದು ಮಗು ಸೇರಿದಂತೆ ನಾಲ್ವರು ಮರಣ ಹೊಂದಿದ್ದಾರೆ.
ಮುಂಡಕ್ಕಾಯ್, ಚುರ್ಲಮಲಾ, ಅತ್ತಮಲಾ ಕಡೆಗಳಲ್ಲಿ ವಿಪರೀತ ಭೂಕುಸಿತ ಉಂಟಾದ ಪರಿಣಾಮ ಎಲ್ಲಾ ಕಡೆ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಭೂಕುಸಿತದಲ್ಲಿ ಸಿಲುಕಿರುವ ಜನರನ್ನು ವಾಯ ಮಾರ್ಗದ ಮೂಲಕ ರಕ್ಷಿಸುವ ಕೆಲಸ ಮಾಡಲಾಗುವ ಬಗ್ಗೆ ಜಿಲ್ಲಾ ಹಂತದ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ ಎಂದು ಶಾಸಕ ಟಿ. ಸಿದ್ಧಿಕ್ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡಿದ್ದಾರೆ.
ಭೂಕುಸಿತಕ್ಕೆ ಸಿಲುಕಿರುವವರ ರಕ್ಷಣೆಗಾಗಿ ವಾಯುಪಡೆಯ ಎರಡು ಎಲಿಕಾಪ್ಟರ್‌ಗಳು ಕಾರ್ಯಕೈಗೊಳ್ಳಲಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
2019ರಲ್ಲಿ ಇದೇ ರೀತಿ ವಯನಾಡಿನ ಮೆಪ್ಪಾಡಿ ಬಳಿ ಗುಡ್ಡ ಕುಸಿದಿತ್ತು. ಇದಾದ ಬಳಿಕ ಈಗ ಮತ್ತೊಮ್ಮೆ ಗುಡ್ಡ ಕುಸಿದಿದೆ.





