ಉತ್ತರ ಪ್ರದೇಶ: ಇಲ್ಲಿನ ಗೊಂಡಾ ಬಳಿ ಗುರುವಾರ (ಜು.18) ಚಂಡೀಗಢ-ದಿಬ್ರುಗಡ ಎಕ್ಸ್‌ಪ್ರಸ್ ರೈಲು ಅಳಿತಪ್ಪಿ ಅಪಘಾತ ಸಂಭವಿಸಿದ್ದು, ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಹಾಗೂ ಗಾಯಳುಗಳ ಸಂಖ್ಯೆ 20ಕ್ಕೂ ಅಧಿಕವಾಗಿದೆ ಎಂದು ವರದಿಯಾಗಿದೆ.
ಚಂಡೀಗಢದಿಂದ ಬರುತ್ತಿದ್ದ ಈ ರೈಲು ಉತ್ತರ ಪ್ರದೇಶದ ಜಿಲಾಹಿ 15904 ರೈಲು ನಿಲ್ದಾಣ ಹಾಗೂ ಗೋಸಾಯಿ ದಿಹ್ವಾ ನಡುವೆ ಹಳಿ ತಪ್ಪಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಮೊದಲು ಇಬ್ಬರು ಸಾವಿಗೀಡಾಗಿದ್ದರು. ಕೆಲ ಸಮಯದ ಬಳಿಕ ಮತ್ತಿಬ್ಬರು ಮೃತರಾಗಿದ್ದು, ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಜತೆಗೆ 25ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದೆ.
ಇನ್ನೂ ರೈಲು ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈಶಾನ್ಯ ರೈಲ್ವೆಯ ಲಕ್ನೋ ವಿಭಾಗದಲ್ಲಿ 15904 ದಿಬ್ರುಗಢ ಎಕ್ಸ್‌ಪ್ರೆಸ್ ಹಳಿತಪ್ಪಿದ ಬಗ್ಗೆ ಸಹಾಯವಾಣಿಯನ್ನು ತೆರೆಯಲಾಗಿದೆ.