Mysore
21
broken clouds

Social Media

ಬುಧವಾರ, 18 ಫೆಬ್ರವರಿ 2026
Light
Dark

ಅಮೇರಿಕಾದಲ್ಲಿ ಕಾಣೆಯಾಗಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಮೃತದೇಹ ಪತ್ತೆ

ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ಕಾಣೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ಅವರ ಮೃತದೇಹ ಪತ್ತೆಯಾಗಿದೆ ಎಂದು ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಭಾರತದ ರಾಯಭಾರ ಕಚೇರಿ (ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ) ಎಕ್ಸ್ ಖಾತೆಯ ಮೂಲಕ ಖಚಿತಪಡಿಸಿದೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬರ್ಕ್ಲಿ (UC Berkeley)ಯಲ್ಲಿ ಎಂ.ಎಸ್ಸಿ (ಕೆಮಿಕಲ್ ಅಂಡ್ ಬಯೋಮಾಲಿಕ್ಯುಲರ್ ಎಂಜಿನಿಯರಿಂಗ್ / ಪ್ರೊಡಕ್ಟ್ ಡೆವಲಪ್‌ಮೆಂಟ್ ಪ್ರೋಗ್ರಾಂ) ವ್ಯಾಸಂಗ ಮಾಡುತ್ತಿದ್ದ ಸಾಕೇತ್, ಫೆಬ್ರವರಿ 9ರಿಂದ ಕಾಣೆಯಾಗಿದ್ದರು.

ಇದರ ಬೆನ್ನಲ್ಲೇ, ಅವರ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಪಾರ್ಕ್ ಹಿಲ್ ನೈಬರ್‌ಹುಡ್ ನಿವಾಸದ ಬಳಿ ಪತ್ತೆಯಾಗಿತ್ತು ಎಂದು ಬರ್ಕ್ಲಿ ಸ್ಕ್ಯಾನರ್ ನ್ಯೂಸ್ ಪೋರ್ಟಲ್ ವರದಿ ಮಾಡಿತ್ತು.

ಸ್ಥಳೀಯ ಪೊಲೀಸರು ಮತ್ತು ಡೈವ್ ತಂಡದಿಂದ ಫೆಬ್ರವರಿ 14ರಂದು ಲೇಕ್ ಅಂಜಾ (Lake Anza) ಬಳಿ ಮೃತದೇಹವನ್ನು ವಶಪಡಿಸಿಕೊಳ್ಳಲಾಯಿತು. ಇದನ್ನು ಭಾರತೀಯ ಕಾನ್ಸುಲೇಟ್ ದೃಢಪಡಿಸಿದೆ.

ಕಾನ್ಸುಲೇಟ್ ಹೇಳಿಕೆಯ ಪ್ರಕಾರ ಸ್ಥಳೀಯ ಆಡಳಿತದೊಂದಿಗೆ ಸಂವಹನ ಸಾಧಿಸಿ, ಸಾಕೇತ್ ಅವರ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ಕಳುಹಿಸಲು ಬೇಕಿರುವ ಎಲ್ಲ ನೆರವು ನೀಡಲಾಗುತ್ತಿದೆ. ನೊಂದಿರುವ ಕುಟುಂಬದ ಜೊತೆಗೆ ರಾಯಭಾರ ಕಚೇರಿ ನಿಲ್ಲುತ್ತದೆ ಎಂದು ತಿಳಿಸಿದೆ.

Tags:
error: Content is protected !!