ನವದೆಹಲಿ: ಹಾಲಿನ ಮೇಲೆ ದರ ಏರಿಕೆ ಮಾಡಿರುವ 4 ರೂ.ಗಳು ಸರ್ಕಾರಕ್ಕೆ ಬರುವುದಿಲ್ಲ. ಬದಲಾಗಿ ಅದು ರೈತರಿಗೆ ಹೋಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹಾಲಿನ ದರ ಏರಿಕೆ ಬೆನ್ನಲ್ಲೇ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಮೊದಲು ಜಿಎಸ್‌ಟಿ ಮೇಲಿನ ಬೆಲೆ, ಪೆಟ್ರೋಲ್ ಮೇಲಿನ ಬೆಲೆ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಹೇಳಿ ನಂತರ ಇದರ ಬಗ್ಗೆ ಮಾತನಾಡಲಿ ಎಂದು ಟಾಂಗ್ ನೀಡಿದರು.
ಬೆಲೆ ಏರಿಕೆ ಹಣ ಸರ್ಕಾರಕ್ಕೆ ಬರಲ್ಲ. ಬದಲಾಗಿ ರೈತರಿಗೆ ಹೋಗುತ್ತದೆ. ಹಾಲಿನ ಸಹಕಾರ ವ್ಯವಸ್ಥೆ ಬಗ್ಗೆ ಅವರ ಅಣ್ಣನ ಬಳಿ ಕೇಳಲಿ ಎಂದು ಕುಟುಕಿದರು.
ಇನ್ನು ಕೆಎನ್ ರಾಜಣ್ಣ ಅವರ ಪುತ್ರ ರಾಜೇಂದ್ರ ಅವರ ಹತ್ಯೆ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ. ಗೃಹ ಸಚಿವರು ಈ ಕುರಿತು ತನಿಖೆ ಮಾಡಿಸುತ್ತಾರೆ ಎಂದರು.