Mysore
21
mist

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲೆ ಗುಂಡಿನ ದಾಳಿ

ನ್ಯೂಯಾರ್ಕ್:‌ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಗುಂಡೇಟಾಗಿದೆ. ಬಟ್ಲರ್‌ನ ಪೆನ್ಸಿಲ್ವೇನಿಯಾದಲ್ಲಿ ಶನಿವಾರ(ಜು.13) ರ್ಯಾಲಿ ನಡೆಸುತ್ತಿದ್ದ ವೇಳೆ ಗುಂಡಿನ ದಾಳಿಯಾಗಿದ್ದು, ಟ್ರಂಪ್‌ನನ್ನು ಹತ್ಯೆ ಮಾಡಲು ಯತ್ನಿಸಲಾಗುತ್ತಿದೆ ಎಂದು ವರದಿಯಾಗುತ್ತಿದೆ.

ಬಂದೂಕುದಾರಿ ಟ್ರಂಪ್‌ನತ್ತ ಶೂಟ್‌ ಮಾಡಿದ್ದರಿಂದ ಕಿವಿಗೆ ತಗುಲಿ ಕಿವಿ ಹಾಗೂ ಮುಖದಲ್ಲಿ ರಕ್ತ ಸುರಿದಿದ್ದು, ಸ್ವಲ್ಪದರಲ್ಲೇ ಟ್ರಂಪ್ ಪಾರಾಗಿದ್ದು, ತಕ್ಷಣ ಭದ್ರತಾ ಸಿಬ್ಬಂದಿಗಳು ರಕ್ಷಣೆಗೆ ಧಾವಿಸಿದ್ದಾರೆ.

ಟ್ರಂಪ್‌ ಅವರು ಬೆಂಬಲಿಗರ ದೊಡ್ಡ ಗುಂಪಿನ ನಡುವೆ ಭಾಷಣ ಮಾಡುತ್ತಿದ್ದಾಗ ಗುಂಡಿನ ದಾಳಿ ನಡೆದಿದ್ದು, ಘಟನೆ ನಡೆದ ಕೂಡಲೇ ಟ್ರಂಪ್‌ ಕೈ ಎತ್ತಿ ಮುಷ್ಠಿ ಹಿಡಿದು ಸಾರ್ವಜನಿಕರತ್ತ ತಮ್ಮ ವಿರೋಧ ವ್ಯಕ್ತಪಡಿಸಿದರು. ಈ ಘಟನೆ ಅಮೆರಿಕಾ ರಾಜಕೀಯ ನಾಯಕರನ್ನು ದಿಗ್ಭ್ರಾಂತಗೊಳಿಸಿದೆ.

ಗುಂಡಿನ ದಾಳಿಯಾದ ತಕ್ಷಣ ಭದ್ರತಾ ಸಿಬ್ಬಂದಿ ಸುತ್ತುವರೆದು ರಕ್ಷಿಸಿ ವೇದಿಕೆಯಿಂದ ಹೊರಕರೆತಂದರು.

ಗುಂಡಿನ ದಾಳಿಕೋರನನ್ನು ಟ್ರಂಪ್‌ ಸಿಬ್ಬಂದಿ ಹತ್ಯೆ ಮಾಡಿದ್ದು, ಶೂಟರ್‌ ಜೊತೆಗೆ ಮತ್ತೊಬ್ಬ ಸಾವಿಗೀಡಾಗಿದಾರೆ ಎಂದು ವರದಿಯಾಗಿದೆ.

Tags:
error: Content is protected !!