ನವದೆಹಲಿ: ಮಾಜಿ ಪ್ರಧಾನಿ, ಜೆಡಿಎಸ್ ನಾಯಕ ಎಚ್.ಡಿ ದೇವೇಗೌಡ ಅವರು ಭಾನುವಾರ(ಆ.4)ದೆಹಲಿ ಮೆಟ್ರೋದಲ್ಲಿ ಸಂಚರಿಸಿ, ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದಾರೆ.
ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿ ರೈಲು ಹತ್ತಿ ಪ್ರಯಾಣಿಸಿದೆ. ಅದೊಂದು ಅದ್ಭುತ ಅನುಭವ. ದೆಹಲಿ ಮೆಟ್ರೋ ಮೂಲಭೂತ ಸೌಕರ್ಯ ನಿರ್ದೇಶಕ ಮನಫಜ್ ಸಿಂಘಾಲ್ ಮತ್ತು ಇತರ ದೆಹಲಿ ಮೆಟ್ರೋ ಸಿಬ್ಬಂದಿ ನನ್ನೊಂದಿಗೆ ತುಂಬಾ ಸಹಕರಿಸಿದರು. ಅವರಿಗೆ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಪೋಸ್ಟ್ ಮಾಡಿದ್ದಾರೆ.

ಅನೇಕ ವರ್ಷದ ಆಸೆ ಇಂದು ನೆರವೇರಿದೆ. ನಾನು 1996 ರಲ್ಲಿ ಪ್ರಧಾನ ಮಂತ್ರಿಯಾಗಿ ನನ್ನ ಕ್ಯಾಬಿನೆಟ್ ಮತ್ತು ಹೊರಗಿನ ಪ್ರತಿರೋಧದ ನಡುವೆ ಯೋಜನೆಗೆ ಆರ್ಥಿಕ ಸಹಕಾರವನ್ನು ನೀಡಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.



