Mysore
18
scattered clouds

Social Media

ಮಂಗಳವಾರ, 27 ಜನವರಿ 2026
Light
Dark

ಲೋಕ ಸಮರ: ಮೋದಿ, ಶಾ ಚುನಾವಣಾ ಪ್ರಚಾರದಲ್ಲಿರಲಿದ್ದಾರೆ ವಿದೇಶಿಗರು?!

ಈ ಬಾರಿಯ ಲೋಕಸಭಾ ಕಣ ರಂಗೇರಿದೆ. ಎಲ್ಲಾ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಪ್ರಚಾರಕ್ಕೆ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಸ್ಟಾರ್‌ ಪ್ರಚಾರಕರಾಗಿ ನಟ-ನಟಿಯರನ್ನು ಕರೆಸುತ್ತಾರೆ. ಆದರೆ ಈ ಬಾರಿ 400ಕ್ಕೂ ಅಧಿಕ ಸೀಟ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಎನ್‌ಡಿಎ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲು ಮುಂದಾಗಿದ್ದು, ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಬೇರೆ-ಬೇರೆ ದೇಶಗಳ ಪ್ರಭಾವಿ ನಾಯಕರನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳಲು ಮುಂದಾಗಿದೆ.

ಭಾರತೀಯ ಎಕ್ಸ್‌ಪ್ರೆಸ್‌ ಪ್ರತಿಕೆ ವರದಿಯ ಪ್ರಕಾರ ಬಿಜೆಪಿಯು 25 ರಾಷ್ಟ್ರಗಳ ರಾಜಕೀಯ ಪಕ್ಷಗಳಿಗೆ ಎನ್‌ಡಿಎ ಪರವಾಗಿ ಪ್ರಚಾರ ನೀಡುವಂತೆ ಆಹ್ವಾನವನ್ನು ನೀಡಿದ್ದು, ಇದರಲ್ಲಿ ಹದಿಮೂರು ಪಕ್ಷಗಳು ಇದುವರೆಗೆ ಆಹ್ವಾನವನ್ನು ಸ್ವೀಕರಿಸಿವೆ. ಇದು ವಿಶ್ವದ ಅತಿದೊಡ್ಡ ಚುನಾವಣಾ ಪ್ರಚಾರವಾಗಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಯುನೈಟೆಡ್ ಕಿಂಗ್‌ಡಮ್‌ನ ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷಗಳು ಮತ್ತು ಜರ್ಮನಿಯ ಕ್ರಿಶ್ಚಿಯನ್ ಡೆಮಾಕ್ರಾಟ್‌ಗಳು ಮತ್ತು ಸಾಮಾಜಿಕ ಪ್ರಜಾಪ್ರಭುತ್ವವಾದಿ ಪಕ್ಷವನ್ನು ಪ್ರಚಾರಕ್ಕೆ ಆಹ್ವಾನಿಸಲಾಗಿದೆ.

ಜೊತೆಗೆ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಹಾಗೂ ನೇಪಾಳದ ಪ್ರಮುಖ ರಾಜಕೀಯ ಪಕ್ಷಗಳು ಸಹಾ ಆಹ್ವಾನ ಪಟ್ಟಿಯಲ್ಲಿವೆ. ಪಟ್ಟಿಯಲ್ಲಿರುವ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ಪ್ರಚಾರದಲ್ಲಿ ಜೊತೆಯಾಗಲಿದ್ದಾರೆ ಎಂದು ಹೇಳಲಾಗಿದೆ.

Tags:
error: Content is protected !!