Mysore
15
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

2024ರ ವಿಶ್ವ ಶ್ರೀಮಂತರ ಪಟ್ಟಿ ಬಿಡುಗಡೆಗೊಳಿಸಿದ ಫೋರ್ಬ್ಸ್;‌ ಮುಖೇಶ್‌ ಅಂಬಾನಿಗೆ ಎಷ್ಟನೇ ಸ್ಥಾನ?

ಪ್ರತಿಷ್ಟಿತ ನಿಯತಕಾಲಿಕ ಫೋರ್ಬ್ಸ್‌ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಫ್ರಾನ್ಸ್‌ನ ಬರ್ನಾರ್ಡ್‌ ಅನೌಲ್ಟ್‌ ಅಂಡ್‌ ಫ್ಯಾಮಿಲಿ ಒಟ್ಟು 233 ಬಿಲಿಯನ್‌ ಡಾಲರ್‌ಗಳೊಂದಿಗೆ ಅಗ್ರಸ್ಥಾದಲ್ಲಿದ್ದರೆ, ಎಲನ್‌ ಮಸ್ಕ್‌ 195 ಬಿಲಿಯನ್‌ ಡಾಲರ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಇನ್ನು ಈ ಬಾರಿಯ ಪಟ್ಟಿಯಲ್ಲಿ ಒಟ್ಟು 200 ಭಾರತೀಯರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ವರ್ಷ 169 ಭಾರತೀಯ ಬಿಲಿಯನೇರ್‌ಗಳಿದ್ದರು. ಈ ಬಾರಿ ಒಟ್ಟು 31 ಬಿಲಿಯನೇರ್‌ಗಳು ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

ಇನ್ನು ಭಾರತೀಯರಲ್ಲಿ ಮುಖೇಶ್‌ ಅಂಬಾನಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. 116 ಬಿಲಿಯನ್‌ ಡಾಲರ್‌ ಹೊಂದಿರುವ ಮುಖೇಶ್‌ ಅಂಬಾನಿ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಕಳೆದ ಬಾರಿ 83 ಬಿಲಿಯನ್ ಡಾಲರ್‌ಗಳನ್ನು ಹೊಂದಿದ್ದ ಮುಖೇಶ್‌ ಅಂಬಾನಿ ಈ ಬಾರಿ ನೂರು ಬಿಲಿಯನ್‌ ಡಾಲರ್‌ ಕ್ಲಬ್‌ ಸೇರಿದ್ದು, ದೇಶದ ಹಾಗೂ ಏಷ್ಯಾದ ಅತಿದೊಡ್ಡ ಶ್ರೀಮಂತ ಎನಿಸಿಕೊಂಡಿದ್ದಾರೆ.

ಭಾರತದ ಅತ್ಯಂತ ಹೆಚ್ಚು ಶ್ರೀಮಂತರ ಪಟ್ಟಿ: ಟಾಪ್‌ 10

ಮುಖೇಶ್‌ ಅಂಬಾನಿ – 116 ಬಿಲಿಯನ್‌ ಡಾಲರ್‌
ಗೌತಮ್‌ ಅದಾನಿ – 82 ಬಿಲಿಯನ್‌ ಡಾಲರ್‌
ಶಿವ ನಡಾರ್‌ – 36.9 ಬಿಲಿಯನ್‌ ಡಾಲರ್‌
ಸಾವಿತ್ರಿ ಜಿಂದಾಲ್‌ – 33.5 ಬಿಲಿಯನ್‌ ಡಾಲರ್‌
ದಿಲೀಪ್‌ ಸಾಂಘವಿ – 26.7 ಬಿಲಿಯನ್‌ ಡಾಲರ್‌
ಸೈರಸ್‌ ಪೂನಾವಾಲಾ – 21.3 ಬಿಲಿಯನ್‌ ಡಾಲರ್‌
ಕುಶಾಲ್‌ ಪಾಲ್‌ ಸಿಂಗ್‌ – 20.9 ಬಿಲಿಯನ್‌ ಡಾಲರ್‌
ಕುಮಾರ್‌ ಬಿರ್ಲಾ – 19.7 ಬಿಲಿಯನ್‌ ಡಾಲರ್‌
ರಾಧಾಕೃಷ್ಣನ್‌ ದಮನಿ – 17.6 ಬಿಲಿಯನ್‌ ಡಾಲರ್‌
ಲಕ್ಷ್ಮಿ ಮಿತ್ತಲ್‌ – 16.4 ಬಿಲಿಯನ್‌ ಡಾಲರ್‌

 

Tags:
error: Content is protected !!