Mysore
17
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಮಹಾರಾಷ್ಟ್ರ: ರೈಲಿನಿಂದ ಬಿದ್ದು ಐವರು ಪ್ರಯಾಣಿಕರು ಸಾವು

railway accident

ಥಾಣೆ: ರೈಲಿನಿಂದ ಇಳಿಯುವಾಗ ಕೆಳಗೆ ಬಿದ್ದು ಐದು ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ:- ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಇಬ್ಬರು ಸಾವು

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ರೈಲು ನಿಲ್ದಾಣದಿಂದ ಕಾಸರ ಕಡೆಗೆ ಹೋಗುತ್ತಿದ್ದ ರೈಲು ತುಂಬಿ ತುಳುಕಿತ್ತು. ಈ ವೇಳೆ ರೈಲಿನಿಂದ ಕೆಳಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಅಪಘಾತ ಹೇಗೆ ನಡೆಯಿತು ಎಂದು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Tags:
error: Content is protected !!