ಬೀಜಿಂಗ್: ವಾಯುವ್ಯ ಚೀನಾದ ಷಿನ್ ಜಿಯಾಂಗ್ ಪ್ರದೇಶದ ವಸತಿ ಸಮುಚ್ಚಯದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ೧೦ ಮಂದಿ ಮೃತಪಟ್ಟು, ೯ ಮಂದಿ ಗಾಯಗೊಂಡಿದ್ದಾರೆ.
ಉರುಮ್‌ಕಿ ವಲಯದ ಟಿಯಾಂಶನ್ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಈ ಅವಘಡ ಸಂಭವಿಸಿದೆ. ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸಲಾಗಿದೆ. ತುರ್ತು ಚಿಕಿತ್ಸೆ ಹೊರತಾಗಿಯೂ ೧೦ ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಇತರೆ ಒಂಬತ್ತು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಟ್ಟಡದ ಮನೆಯೊಂದರ ಮಲಗುವ ಕೋಣೆಯ ಶಾರ್ಟ್ ಸಕ್ಯೂಟ್ನಿಂದ ಈ ಅವಘಡ ಸಂಭವಿಸಿದೆ ಎಂದು ಸಿಜಿಟಿಎನ್ ಟಿವಿ ವರದಿ ಮಾಡಿದೆ.





