ನವದೆಹಲಿ: ಮಿತ್ರರ ಜೇಬು ತುಂಬಿಸುವುದೇ ಪ್ರಧಾನಿ ಮೋದಿ ಅವರಿಗೆ ʼರಾಷ್ಟ್ರ ನಿರ್ಮಾಣʼದ ಕೆಲಸ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮ ʼಎಕ್ಸ್ʼ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಅಮೇರಿಕಾ ಪ್ರವಾಸದಲ್ಲಿರುವ ಮೋದಿ, ಉದ್ಯಮಿ ಗೌತಮ್ ಅದಾನಿ ಅವರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕೇಳಿದ ಪ್ರಶ್ನೆಗೆ, ವಿದೇಶದಲ್ಲಿ ನಿಂತು ವೈಯುಕ್ತಿಕ ವಿಚಾರ ಎನ್ನುತ್ತಾರೆ” ಎಂದು ಆರೋಪಿಸಿದರು.
ದೇಶದಲ್ಲಿ ಪ್ರಶ್ನೆ ಕೇಳಿದರೆ, ಮೌನ ವಹಿಸುತ್ತಾರೆ. ಆದರೆ, ವಿದೇಶದಲ್ಲಿ ಕೇಳಿದರೆ, ವೈಯುಕ್ತಿಕ ವಿಚಾರ ಎಂದು ಹೇಳುವ ಮೂಲಕ ಅದಾನಿ ಅವರ ಭ್ರಷ್ಟಚಾರವನ್ನು ಮುಚ್ಚಿಹಾಕುತ್ತಿದ್ದಾರೆ ಎಂದರು.
ಅಮೇರಿಕಾದ ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.





