Mysore
16
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

ಮಹಾಂತ್ ಬಾಲಕನಾಥ್ ಯೋಗಿ ರಾಜಸ್ಥಾನದ ಸಿಎಂ? ವೈರಲ್ ಆದ ಪತ್ರದ ಹಿಂದಿನ ಅಸಲಿಯತ್ತೇನು?

ಕಳೆದ ಭಾನುವಾರ ( ಡಿಸೆಂಬರ್ 3 ) ರಾಜಸ್ಥಾನ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿತ್ತು. ಭಾರತೀಯ ಜನತಾ ಪಾರ್ಟಿ ಸ್ಪಷ್ಟ ಬಹುಮತ ಪಡೆದುಕೊಳ್ಳುವ ಮೂಲಕ‌ ಅಧಿಕಾರದ ಚುಕ್ಕಾಣಿ ಹಿಡಿಯುವ ಅರ್ಹತೆ ಗಿಟ್ಟಿಸಿಕೊಂಡಿತು‌.

ಕೇವಲ ರಾಜಸ್ಥಾನ ಮಾತ್ರವಲ್ಲದೇ ಛತ್ತೀಸ್ ಘಡ ಹಾಗೂ ಮಧ್ಯ ಪ್ರದೇಶದಲ್ಲೂ ಸಹ ಬಿಜೆಪಿ ಜಯ ಸಾಧಿಸಿತು. ಈ ಬೃಹತ್ ಗೆಲುವಿನ ಬಳಿಕ ಯಾರಿಗೆ ಈ ರಾಜ್ಯಗಳ ಸಿಎಂ ಜವಾಬ್ದಾರಿಯನ್ನು ವಹಿಸಬೇಕು ಎಂಬುದು ಬಿಜೆಪಿ ಹೈಕಮಾಂಡ್ ಮುಂದಿರುವ ಸವಾಲಾಗಿದೆ.

ಈ ವಿಷಯದ ಕುರಿತಾಗಿ ನಾಳೆ ಸಭೆ ನಡೆಯಲಿದ್ದು, ಇಂದು ಸಂಜೆ ವೇಳೆಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದು ವೈರಲ್ ಆಗಿದೆ‌. ಬಿಜೆಪಿ ಪಕ್ಷದ ಮಹಾಂತ್ ಬಾಲಕನಾಥ್ ಯೋಗಿ ರಾಜಸ್ಥಾನದ ಮುಖ್ಯಮಂತ್ರಿ ಎಂದು ಬಿಜೆಪಿ ಆಯ್ಕೆ ಮಾಡಿದೆ ಎಂದು ಉಲ್ಲೇಖಿಸಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಪತ್ರ ನೋಡಿದ ಹಲವರು ಯೋಗಿ ಫೋಟೊ ಹಂಚಿಕೊಂಡು ಶುಭವನ್ನೂ ಸಹ ಕೋರಿದ್ದಾರೆ.

ಆದರೆ ಇದರ ಹಿಂದಿನ ಸತ್ಯಾಂಶ ಬೇರೆಯದ್ದೇ ಇದೆ. ಇದೊಂದು ನಕಲಿ ಪತ್ರವಾಗಿದ್ದು, ಕಿಡಿಗೇಡಿಗಳು ಈ ಪತ್ರವನ್ನು ವೈರಲ್ ಮಾಡಿದ್ದಾರೆ‌. ಹೀಗೆ ಪತ್ರವೊಂದು ವೈರಲ್ ಆಗ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ರಾಜಸ್ಥಾನ ಬಿಜೆಪಿ ಇದು ಸುಳ್ಳು ಎಂಬ ವಿಷಯವನ್ನು ಟ್ವಿಟರ್ ಮೂಲಕ ತಿಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!