Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಲೋಕಸಮರ 2024: ಇವಿಎಂ ಹೊತ್ತ ಬಸ್‌ ಬೆಂಕಿಗಾಹುತಿ

ಮಧ್ಯಪ್ರದೇಶ: ನಿನ್ನೆ (ಮೇ.7) ದೇಶಾದ್ಯಂತ ನಡೆದ ಮೂರನೇ ಹಂತದ ಚುನಾವಣೆಯಲ್ಲಿ ಒಟ್ಟು 92ಕ್ಷೇತ್ರಗಳಿಗೆ ಮತದಾನ ನಡೆದಿದೆ. ಇನ್ನು ಮಧ್ಯಪ್ರದೇಶದಲ್ಲಿ ಮತದಾನ ನಡೆದ ಬಳಿಕ ಮತಗಟ್ಟೆಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ಬಸ್‌ ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.

ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯ ಗೋಲಾ ಗ್ರಾಮದಿಂದ ಮತಯಂತ್ರ ಸಾಗಿಸುತ್ತಿದ್ದ ವಾಹನಕ್ಕೆ ಮಂಗಳವಾರ ತಡರಾತ್ರಿ 11 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಕೆಲವು ಇವಿಎಂ ಯಂತ್ರಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ನರೇಂದ್ರ ಸೂರ್ಯವಂಶಿ ಹೇಳಿದ್ದಾರೆ.

ಬೂತ್‌ ಸಂಖ್ಯೆ 275, 276, 277, 278, 279, 280 ಸೇರಿದಂತೆ ನಾಲ್ಕು ಮತಗಟ್ಟೆಗಳ ಇವಿಎಂಗೆ ಹಾನಿಯಾಗಿದೆ. ಎರಡು ಇವಿಎಂ ಗಳು ಸುರಕ್ಷಿತವಾಗಿದೆ. ಹಾನಿಯಾಗಿರುವ ಇವಿಎಂಗಳ ಬ್ಯಾಲೆಟ್‌ ಯೂನಿಟ್‌ಗೆ ಹೆಚ್ಚಿನ ಹಾನಿಯಾಗಿದೆ. ಹಾಗೂ ಬಸ್‌ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಬೇತುಲ್‌ ಲೋಕಸಭಾ ಕ್ಷೇತ್ರದಲ್ಲಿ ಶೇ.72.65 ರಷ್ಟು ಮತದಾನವಾಗಿದೆ. ಹಾನಿಗೊಳಗಾದ ಮತೆಗಟ್ಟೆಗಳ ಮರು ಮತದಾನಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

Tags: