Mysore
23
haze

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಇಒಎಸ್‌-08 ಭೂವೀಕ್ಷಣಾ ಕಿರು ಉಪಗ್ರಹ ಉಡ್ಡಯನ ಯಶಸ್ವಿ!

ಶ್ರೀಹರಿಕೋಟಾ: ಭೂವೀಕ್ಷಣಾ ಕಿರು ಉಪಗ್ರಹ ಇಒಎಸ್‌-08 ಉಡ್ಡಯನ ಯಶಸ್ವಿಯಾಗಿದೆ. ಬೆಂಗಳೂರಿನ ಬಾಹ್ಯಾಕಾಶ ಕೇಂದ್ರದಿಂದ ನಿರ್ವಹಿಸಲಾಗುತ್ತಿರುವ ಮೂರನೇ ಮಿಷನ್‌ ಇದಾಗಿರುವುದು ವಿಶೇಷ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಬೆಳಿಗ್ಗೆ 9.17ಕ್ಕೆ ಸರಿಯಾಗಿ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡ್ಡಯನ ಕೇಂದ್ರದಿಂದ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ ನಿರ್ಮಿಸಿರುವ ಎಸ್‌ಎಲ್‌ಎಲ್‌ವಿ -ಡಿ3 ಕಿರು ಉಪಗ್ರಹ ಹೊತ್ತ ರಾಕೇಟ್‌ನ್ನು ಯಶಸ್ವಿಯಾಗಿ ಉಡ್ಡಯನ ಮಾಡಲಾಯಿತು.

ಈ ಇಒಎಸ್‌-08 ಮೈಕ್ರೋಸ್ಯಾಟಲೈಟ್‌ ವಿನ್ಯಾಸ, ಅಭಿವೃದ್ಧಿ ಹಾಗೂ ಉಪಗ್ರಹಗಳ ಕಾರ್ಯಾಚರಣೆಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ.

175.5 ಕೆಜಿ ತೂಕದ ಕಿರು ಪುಗ್ರಹ ಮೂರು ಪೆಲೋಡ್‌ಗಳನ್ನು ಒಳಗೊಂಡಿದೆ. ಇಒಐಆರ್‌, ಜಿಎನ್‌ಎಸ್‌ಎಸ್‌-ಆರ್‌ ಮತ್ತು ಎಸ್‌ಐಸಿ ಯುವಿ ಡೊಸೀಮೀಟರ್‌ನ್ನು ಹೊಂದಿದೆ.

SSLV-D3/EOS-08 ಮಿಷನ್: ಎಸ್‌ಎಸ್‌ಎಲ್‌ವಿಯ ಮೂರನೇ ಅಭಿವೃದ್ಧಿ ಹಾರಾಟ ಯಶಸ್ವಿಯಾಗಿದೆ. SSLV-D3 EOS-08 ಅನ್ನು ನಿಖರವಾಗಿ ಕಕ್ಷೆಗೆ ಸೇರಿಸಿತು.

ಇದು ISRO/DOS ನ SSLV ಡೆವಲಪ್‌ಮೆಂಟ್ ಪ್ರಾಜೆಕ್ಟ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದನ್ನು ಸೂಚಿಸುತ್ತದೆ.

ತಂತ್ರಜ್ಞಾನ ವರ್ಗಾವಣೆಯೊಂದಿಗೆ, ಭಾರತೀಯ ಉದ್ಯಮ ಮತ್ತು ಎನ್‌ಎಸ್‌ಐಎಲ್‌ ಈಗ ವಾಣಿಜ್ಯ ಕಾರ್ಯಾಚರಣೆಗಳಿಗಾಗಿ SSLV ಅನ್ನು ಉತ್ಪಾದಿಸುತ್ತದೆ.

https://x.com/DrJitendraSingh/status/1824296320309530671

https://x.com/isro/status/1824295769907818833

Tags:
error: Content is protected !!