ವಾಷಿಂಗ್ಟನ್: ಅಮೆರಿಕದ ರಾಷ್ಟ್ರ ಭಾಷೆಯನ್ನಾಗಿ ಇಂಗ್ಲಿಷ್ ಅನ್ನು ಘೋಷಿಸಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಈ ಬಗ್ಗೆ ಶ್ವೇತ ಭವನದ ಅಧಿಕಾರಿಗಳು ದೃಢಪಡಿಸಿದ್ದು, ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಅಮೆರಿಕ ದೇಶ ಸ್ಥಾಪನೆಯಾಗಿ 250ವರ್ಷಗಳಾಗಿವೆ. ಆದರೆ, ಈವರೆಗೂ ಅಧಿಕೃತವಾಗಿ ಭಾಷೆಯೆಂಬುದು ಇರಲಿಲ್ಲ. ಹೀಗಾಗಿ ದೇಶದಲ್ಲಿ ಏಕತೆ ಮೂಡಿಸಲು ಹಾಗೂ ಸರ್ಕಾರದ ದಕ್ಷತೆಯನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
ದೇಶದಲ್ಲಿ 340ಮಿಲಿಯನ್ ನಿವಾಸಿಗಳಲ್ಲಿ ಸುಮಾರು 68 ಮಿಲಿಯನ್ ಜನರು ಇಂಗ್ಲಿಷ್ ಅನ್ನು ಹೊರತುಪಡಿಸಿದರೆ ಬೇರೆ ಭಾಷೆಯನ್ನು ಮಾತನಾಡುತ್ತಾರೆ. ಇದು 160ಕ್ಕೂ ಹೆಚ್ಚು ಸ್ಥಳೀಯ ಅಮೆರಿಕನ್ ಭಾಷೆಗಳನ್ನು ಒಳಗೊಂಡಿದೆ ಎಂದು ಅಮೆರಿಕದ ಜನಗಣತಿಯ ವರದಿ ಮಾಹಿತಿ ನೀಡಿದೆ.




