ನವದೆಹಲಿ: ಇತ್ತೀಚೆಗೆ ಆಫ್ರಿಕಾದದ್ಯಾಂತ ಹರಡಿರುವ ಎಂಪಾಕ್ಸ್ ಸೋಂಕು ವಿರುದ್ಧ ಹೋರಾಡಲು ವಿಶ್ವ ಆರೋಗ್ಯ ಸಂಸ್ಥೆಯು ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ರೋಗ ನಿಯಂತ್ರಣಕ್ಕಾಗಿ ಪ್ರಥಮ ಬಾರಿಗೆ ಎಂಪಾಕ್ಸ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡಿದೆ.
ಆಫ್ರಿಕಾದಲ್ಲಿ ಪ್ರಸ್ತುತ ರೋಗ ಉಲ್ಬಣಗೊಂಡಿದ್ದು, ಈ ರೋಗದ ವಿರುದ್ಧ ಹೋರಾಡಲು ಈ ಲಸಿಕೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಯುಎನ್ ಆರೋಗ್ಯ ಏಜೆನ್ಸಿ ಮುಖ್ಯಸ್ಥರು ಲಸಿಕೆಯನ್ನು ಹೆಚ್ಚು ಅಗ್ಯವಿದ್ದಲ್ಲಿ ಪಡೆಯಲು ಸಂಗ್ರಹಣೆ, ದೇಣಿಗೆಗಳು ಮತ್ತು ಲಸಿಕೆ ವಿತರಣೆಯ ತುರ್ತು ಪ್ರಮಾಣಕ್ಕೆ ವಿಶ್ವ ಸಂಸ್ಥೆ ಕರೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರದ ಅಡಿಯಲ್ಲಿ ಈ ಲಸಿಕೆಯನ್ನು ೧೮ ವರ್ಷದವರಿಗೆ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯೋಮಾನದವರಿಗೆ ೨ ಡೋಸ್‌ನಂತೆ ನೀಡಬಹುದಾಗಿದೆ. ಲಸಿಕೆಯನ್ನು ೧೮ ವರ್ಷಕ್ಕಿಂತ ಕಡಿಮೆ ಇರುವ ವಯಸ್ಸಿನವರಿಗೆ ನೀಡುವಾಗ ಯಾವುದೇ ಅಪಾಯ ಸಂಭವಿಸದೆ ಇದ್ದರೆ ಅದನ್ನು ಶಿಶುಗಳು, ಮಕ್ಕಳು ಹಾಗೂ ಹದಿಹರೆಯದವರಲ್ಲಿ ಬಳಸಬಹುದು ಎಂದು ಅನುಮೋದನೆಯಲ್ಲಿ ಉಲ್ಲೇಖಿಸಲಾಗಿದೆ.
ಎಂಪ್ಯಾಕ್ಸ್ ಲಸಿಕೆಯನ್ನು ಬಳಸಲು ಈಗಾಗಲೇ ವಿಶ್ವಸಂಸ್ಥೆ ಅನುಮೋದನೆ ನೀಡಿದಲ್ಲದೆ, ಲಸಿಕೆಯನ್ನು ಆಫ್ರಿಕಾ ಮತ್ತು ಅದರಾಚೆಗಿನ ದೇಶಗಳು ರೋಗದ ವಿರುದ್ಧ ಹೋರಾಡುವ ದಿಟ್ಟ ಹೆಜ್ಜೆ ಎಂದಿದೆ.
ಲಸಿಕೆಗೆ ಸಂಬಂಧ ಪಟ್ಟಂತೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ನಿರ್ದೇಶಕ ಟೆಡ್ರೋಸ್ ಅಧಾನಮ್ ಘೆಬ್ರೆಯೆಸಸ್ ಮಾತನಾಡಿ, ಪ್ರಸ್ತುತ ಆಫ್ರಿಕಾದಲ್ಲಿ ರೋಗ ಹೆಚ್ಚಾಗುತ್ತಿದೆ. ಹೀಗಾಗಿ ಅದನ್ನು ತಡೆಯಲು ಪೂರ್ವ ಅರ್ಹತೆಯ ಲಸಿಕೆ ತಯಾರಿಸಿರುವುದು ಒಂದು ಪ್ರಮುಖ ಹೆಜ್ಜೆಯಾಗಿದೆ. ಅಲ್ಲದೆ ಭವಿಷ್ಯದಲ್ಲಿ ಈ ಲಸಿಕೆ ರೋಗಗಳು ಬರದಂತೆ ಹೋರಾಟ ಮಾಡುವಲ್ಲಿ ಯಶ್ವಸಿಯಾಗುತ್ತದೆ ಎಂದು ಹೇಳಿದ್ದಾರೆ.