ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಹೇಳಿಕೆಗಳನ್ನು ನೀಡುವ ಭರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಏ.29ರ ಬೆಳಿಗ್ಗೆ 11 ಗಂಟೆ ಒಳಗಾಗಿ ಉತ್ತರಿಸುಬೇಕು ಎಂದು ಚುನಾವಣಾ ಆಯೋಗವು ಈ ಇಬ್ಬರು ನಾಯಕರಿಗೆ ಸೂಚಿಸಿದೆ.
ಮುಸ್ಲಿಂ ಪದ ಬಳಸದೇ ನರೇಂದ್ರ ಮೋದಿ ಅವರು, ಮುಸ್ಲಿಂರನ್ನು ನುಸುಳುಕೊರರು, ಹೆಚ್ಚು ಮಕ್ಕಳನ್ನು ಹೊಂದಿರುವವರು ಎಂದು ಹೇಳುವ ಮೂಲಕ ಭಾರತದಲ್ಲಿ ಬಡತನ ಹೆಚ್ಚಾಗಲು ಕಾರಣ ಎಂದು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಬಿಜೆಪಿ ದೂರು ನೀಡಿದೆ.
ಜಾತಿ, ಧರ್ಮ, ಭಾಷೆ ಮತ್ತು ಸಮುದಾಯದ ಮೇಲೆ ದೇಶ ವಿಭಜಿಸುವ ಕೆಲಸ ಮಾಡಲಾಗಿದೆ ಮತ್ತು ದ್ವೇಷ ಭಾಷಣ ಮಾಡಿದೆ ಎಂದು ಪರಸ್ಪರ ಬಿಜೆಪಿ ಮತ್ತು ಕಾಂಗ್ರೆಸ್ ಒಬ್ಬರ ಮೇಲೊಬ್ಬರು ದೂರಿದ್ದಾರೆ.
ಈ ಹಿನ್ನಲೆ ಚುನಾವಣಾ ಆಯೋಗವು ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 77ರ ಅಡಿಯಲ್ಲಿ ಎರಡೂ ಪಕ್ಷದವರಿಗೆ ನೊಟೀಸ್ ಜಾರಿ ಮಾಡಿದೆ.





