Mysore
15
clear sky

Social Media

ಶನಿವಾರ, 24 ಜನವರಿ 2026
Light
Dark

ಬಲಿಷ್ಟ ರಾಷ್ಟ್ರ ಭಾರತದೊಂದಿಗೆ ಸಂಬಂಧವನ್ನು ಹದಗೆಡಿಸಬೇಡಿ: ಡೊನಾಲ್ಡ್‌ ಟ್ರಂಪ್‌ಗೆ ನಿಕ್ಕಿ ಹ್ಯಾಲಿ ಸಲಹೆ

ವಾಷಿಂಗ್ಟನ್: ಭಾರತ, ಅಮೆರಿಕ ನಡುವೆ ಸುಂಕ ಸಮರ ತಾರಕಕ್ಕೇರಿರುವ ಬೆನ್ನಲ್ಲೇ, ಇಂತಹ ನಿರ್ಣಾಯಕ ಸಮಯದಲ್ಲಿ ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳಬೇಡಿ ಎಂದು ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲಿ ಅವರು ಡೊನಾಲ್ಡ್ ಟ್ರಂಪ್‍ಗೆ ಸಲಹೆ ನೀಡಿದ್ದಾರೆ.‌

ರಷ್ಯಾದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಮುಂದಿನ 24 ಗಂಟೆಯಲ್ಲಿ ಸುಂಕ ಗಣನೀಯ ಏರಿಕೆ ಮಾಡುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಗೆ ನಿಕ್ಕಿ ಹ್ಯಾಲಿ ಪ್ರತಿಕ್ರಿಯಿಸಿದ್ದು, ಟ್ರಂಪ್ ಅವರ ಪ್ರಸ್ತಾಪಗಳು ನಿರ್ಣಾಯಕ ಸಂದರ್ಭದಲ್ಲಿ ಭಾರತ-ಅಮೆರಿಕದ ಸಂಬಂಧಗಳನ್ನು ಹದಗೆಡಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು ನಿಕ್ಕಿ, ಟ್ರಂಪ್ ಆಡಳಿತವು ದ್ವಿಮುಖ ನೀತಿ ಅಳವಡಿಸಿಕೊಂಡಿದೆ. ಚೀನಾದಂತಹ ಶತ್ರು‌ ರಾಷ್ಟ್ರಕ್ಕೆ ವ್ಯಾಪಾರಕ್ಕಾಗಿ ಅಮೆರಿಕ 90 ದಿನಗಳ ಸುಂಕ ವಿನಾಯ್ತಿ ನೀಡಿದೆ. ಆದರೆ ಭಾರತದ ಮೇಲೆ ಕಠಿಣ ನಿರ್ಧಾರಕ್ಕೆ ಮುಂದಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಭಾರತಕ್ಕೆ ರಷ್ಯಾದಿಂದ ತೈಲ ಖರೀದಿಸಬಾರದು ಎಂದು ಟ್ರಂಪ್ ಹೇಳುತ್ತಾರೆ. ಆದರೆ ರಷ್ಯಾ ಮತ್ತು ಇರಾನ್‍ನ ಅತಿದೊಡ್ಡ ತೈಲ ಖರೀದಿದಾರ ಚೀನಾಗೆ 90 ದಿನಗಳ ಸುಂಕ ವಿನಾಯ್ತಿ ಕೊಡುತ್ತಾರೆ. ಇದು ಒಳ್ಳೆಯದಲ್ಲ. ಚೀನಾದಂಥ ಶತ್ರು ರಾಷ್ಟ್ರಕ್ಕೆ ರಿಯಾಯತಿ ನೀಡಬೇಡಿ. ಹಾಗೆಯೇ ಭಾರತದಂತಹ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧವನ್ನು ಹದಗೆಡಿಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

Tags:
error: Content is protected !!