ನ್ಯೂಯಾರ್ಕ್: 2016 ರ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ವೇಳೆ ತಮ್ಮ ವಿರುದ್ಧ ಮಾತನಾಡದಿರಲು ನೀಲಿಚಿತ್ರಗಳ ತಾರೆಗೆ ಹಣ ಆಮಿಷ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೋಷಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಇಲ್ಲಿನ ಮ್ಯಾನ್‌ಹಟನ್ ನ್ಯಾಯಾಯಲಯದ 11ನೇ ನ್ಯಾಯಾದೀಶರ ಸಮಿತಿ ಗುರುವಾರ ಸರ್ವಾನುಮತದಿಂದ ಈ ತೀರ್ಪುನ್ನು ನೀಡಿವೆ. ಈ ಪ್ರಕಟಣೆ ಬೆನ್ನಲ್ಲೇ ಅಪರಾಧಕ್ಕಾಗಿ ಶಿಕ್ಷೆಗೆ ಒಳಗಾದ ಮೊದಲ ಅಧ್ಯಕ್ಷ ಎಂಬ ಹೊಸ ಚರಿತ್ರೆಯನ್ನು ಟ್ರಂಪ್ ಸೃಷ್ಠಿಸಿದ್ದಾರೆ.
ನ್ಯಾಯಾಲಯ ಟ್ರಂಪ್‌ನನ್ನು ತಪ್ಪಿತಸ್ಥ ಎಂದು ಘೋಷಿಸಿದ್ದು, ಟ್ರಂಪ್‌ಗೆ ಬಂಧನದ ಭೀತಿ ಎದುರಾಗಿದೆ. ಮತ್ತು ಯಾವ ಪ್ರಮಾಣದ ಶಿಕ್ಷೆಯನ್ನು ನ್ಯಾಯಾಲಯದ ವಿಧಿಸಲಿದೆ ಎಂಬುದು ಮುಂದಿನ ವಾರ ತಿಳಿಯಲಿದೆ ಎಂದು ವರದಿಯಾಗಿದೆ.
2016ರ ಚುನಾವಣೆ ವೇಳೆ ನೀಲಿ ಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರು ತಾವು ಟ್ರಂಪ್ ಜತೆ ಲೈಂಗಿಕ ಸಂಪರ್ಕ ಹೊಂದಿದ್ದೆ ಎಂದು ಹೇಳಿದ್ದರು. ಮತ್ತೆ ಈ ರೀತಿಯ ಹೇಳಿಕೆ ನೀಡದಂತೆ ಮನವಿ ಮಾಡಿ, ನಟಿಗೆ ಭಾರೀ ಪ್ರಮಾಣದ ಹಣ ನೀಡಲಾಗಿತ್ತು ಎಂದು ಟ್ರಂಪ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಟ್ರಂಪ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಮಿಚೆಲ್ ಕೊಹೇನ್ ಅವರು ನಟಿ ಬರೋಬ್ಬರಿ 1.3 ಲಕ್ಷ ಡಾಲರ್ ಹಣ ನೀಡಿದ್ದರು. ಈ ಪಾವತಿಯನ್ನು ಮಾಡಿದ್ದು ಏಕೆ ಮತ್ತು ಹೇಗೆ? ಎಂಬ ಅಂಶಗಳ ಮೇಲೆ ವಿಚಾರಣೆಗೆ ಒತ್ತು ನೀಡಲಾಗಿದೆ ಎಂದು ವರದಿಯಾಗಿದೆ.