Mysore
24
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಡಿಎಂಕೆ ಹಾಗೂ ಬಿಜೆಪಿ ವಿರೋಧಿಗಳಂತೆ ನಾಟಕವಾಡುತ್ತಿದ್ದಾರೆ: ಪಳನಿಸ್ವಾಮಿ

ತಮಿಳುನಾಡು: ಡಿಎಂಕೆ ಹಾಗೂ ಬಿಜೆಪಿ ಪಕ್ಷಗಳು ಮೇಲ್ನೋಟಕ್ಕೆ ವಿರೋಧಿಗಳಂತೆ ನಾಟಕವಾಡುತ್ತಿದ್ದಾರೆ. ಆದರೆ ಈ ಎರಡೂ ಪಕ್ಷಗಳು ಒಳಗೊಳಗೇ ವಿವೇಚನಾ ಒಪ್ಪಂದ ಮಾಡಿಕೊಂಡಿದೆ ಎಂದು ತಮಿಳುನಾಡು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಆಕ್ರೋಶ ಹೊರಹಾಕಿದರು.

ಈ ಬಗ್ಗೆ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ಕರುಣಾನಿಧಿ ಜನ್ಮ ಶತಮಾನೋತ್ಸವ ನೆನಪಿನಲ್ಲಿ ನಾಣ್ಯ ಬಿಡುಗಡೆ ಮಾಡಲು ಯೋಜಿಸಿದೆ ಎಂದು ಸಿಎಂ ಸ್ಟಾಲಿನ್‌ ಅವರು ಹೇಳಿದ್ದರು. ಆದರೆ ನನಗೆ ಬಂದ ಆಹ್ವಾನ ಪತ್ರಿಕೆಯಲ್ಲಿ ರಾಜ್ಯ ಸರ್ಕಾರದ ಲಾಂಛನವಿತ್ತು. ಇದನ್ನು ಸ್ವತಃ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರೇ ಕಳುಹಿಸಿದ್ದರು. ಇದು ರಾಜ್ಯ ಸರ್ಕಾರದ ಕಾರ್ಯಕ್ರಮ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಕಿಡಿಕಾರಿದರು.

ಡಿಎಂಕೆ ಇಂಡಿಯಾ ಮೈತ್ರಿಕೂಟದ ಸದಸ್ಯರಾಗಿದ್ದರೂ ಸಹಾ ಈ ಕಾರ್ಯಕ್ರಮಕ್ಕೆ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಿರಲಿಲ್ಲ. ತಮ್ಮ ಭ್ರಷ್ಟ ಸರ್ಕಾರವನ್ನು ರಕ್ಷಿಸಿಕೊಳ್ಳಲು ಕೇಂದ್ರ ಸರ್ಕಾರದ ನೆರವು ಕೇಳಲು ಪ್ರಯತ್ನಿಸುತ್ತಿದೆ. ಕಳೆದ ವಾರದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಸಚಿವ ಎಲ್‌. ಮುರುಗನ್‌, ಕೆ. ಅಣ್ಣಾಮಲೈ ಅವರು ಭಾಗಿಯಾಗಿದ್ದರು ಎಂದೂ ಮಾಹಿತಿ ನೀಡಿದರು.

Tags: