Mysore
35
few clouds

Social Media

ಶುಕ್ರವಾರ, 10 ಏಪ್ರಿಲ 2026
Light
Dark

UPI ಸೇವೆಯಲ್ಲಿ ವ್ಯತ್ಯಯ : ಗೂಗಲ್‌ ಪೇ, ಫೋನ್ ಪೇ ಬಳಕೆದಾರರಿಗೆ ಸಮಸ್ಯೆ

ಹೊಸದಿಲ್ಲಿ : ಮೊಬೈಲ್‌ನಿಂದ ಹಣ ಪಾವತಿ ಮಾಡುವ ಯುಪಿಐ ಸೇವೆಯಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ದೇಶಾದ್ಯಂತ ವ್ಯತ್ಯಯ ಕಂಡು ಬಂದಿದೆ. ಇದರಿಂದ ಡಿಜಿಟಲ್‌ ಬಳಕೆದಾರರು ವಹಿವಾಟು ನಡೆಸಲು ಪರದಾಡಿದರು.

ಕಳೆದೊಂದು ತಿಂಗಳಲ್ಲಿ ಮೂರನೇ ಬಾರಿಗೆ ಯುಪಿಐ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿದ್ದು, ಇದರಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಯಂತ್ರಣದ ಎನ್‌ಸಿಪಿಐ ನಿರ್ವಹಿಸುವ ತ್ವರಿತ ಪಾವತಿಗೆ ಅಡ್ಡಿಯಾಗಿದೆ.

ಡೌನ್‌ಡೆಕ್ಟರ್‌ ನೀಡಿದ ಮಾಹಿತಿ ಪ್ರಕಾರ, ಮಧ್ಯಾಹ್ನ ವೇಳೆಗೆ ಯುಪಿಐ ಸಂಬಂಧಿತ ಸಮಸ್ಯೆಗಳು ವರದಿಯಾಗಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಎನ್‌ಪಿಸಿಐ ದೇಶದ ಹಲವೆಡೆ ಪಾವತಿ ಸಮಸ್ಯೆ ಎದುರಾಗಿದೆ. ಇದನ್ನು ತ್ವರಿತಗತಿಯಲ್ಲಿ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದೆ.

ಬಳಕೆದಾರರ ಆಕ್ರೋಶ
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಯುಪಿಐ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದ್ದಾರೆ.

ಈ ದಿಢೀರ್‌ ತೊಂದರೆಯಿಂದ ಯುಪಿಐ ಮೇಲೆ ಪರಿಣಾಮ ಬೀರಿದ್ದು, ಇದಕ್ಕಿಂತ ನಗದು ವಹಿವಾಟೇ ಮೇಲು ಎಂದು ಬರೆದುಕೊಂಡಿದ್ದಾರೆ.

 

 

Tags:
error: Content is protected !!