ವಿಶ್ವದಾದ್ಯಂತ ಮೈಕ್ರೋಸಾಫ್ಟ್ ವೇರ್ ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಪರಿಣಾಮ ಹಲವು ವಿಮಾನಗಳ ಸೇವೆಯಲ್ಲಿ ವಿಳಂಬ ಹಾಗೂ ಭಾರೀ ವ್ಯತ್ಯಯ ಉಂಟಾಯಿತು. ದೆಹಲಿ, ನ್ಯೂಯಾರ್ಕ್ ಸೇರಿದಂತೆ ಹಲವೆಡೆ ವಿಮಾನ ಸಂಚಾರ ಸ್ಥಗಿತಗೊಂಡಿದೆ.
ಈ ಮೈಕ್ರೋಸಾಫ್ಟ್ ಸರ್ವರ್ ನಲ್ಲಿ ವ್ಯತ್ಯಯವಾದ ಪರಿಣಾಮ ಜಾಗತಿಕ ಮಟ್ಟದಲ್ಲಿ ಬಹಳಷ್ಟು ಸಮಸ್ಯೆಗಳು ಆಗಿದೆ. ವಿಶ್ವದಾದ್ಯಂತ ವಿಮಾನ ಸಂಚಾರ, ಸೇವೆಯಲ್ಲಿ ವ್ಯತ್ಯಯವಾಗಿದ್ರೆ ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ಸೇವೆ ಕೂಡ ಸ್ಥಗಿತ ಗೊಡಿತ್ತು. ಅಲ್ಲದೆ ಭಾರತದಲ್ಲೂ ವಿಮಾನ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ರವಾನೆ ಮಾಡಲಾಗಿದೆ. ಎಸ್.ಎಂ.ಎಸ್ ಮೂಲಕ ಪ್ರಯಾಣಿಕರಿಗೆ ಏರ್ ಲೈನ್ಸ್ ಕಂಪನಿಗಳು ಮಾಹಿತಿ ನೀಡುತ್ತಿವೆ. ಪ್ರಯಾಣಿಕರು ಬಹಳ ಬೇಗನೇ ವಿಮಾನ ನಿಲ್ದಾಣಕ್ಕೆ ಬಂದು ಮ್ಯಾನ್ಯುಯಲ್ ಆಗಿ ಚೆಕ್ ಇನ್ ಮಾಡಲು ಸೂಚನೆ ನೀಡಲಾಗುತ್ತಿದೆ.
ಅಲ್ಲದೆ ಟೆಲಿಕಾಂ ಕಂಪನಿಗಳಿಗೂ ಈ ಮೈಕ್ರೋಸಾಫ್ಟ್ ಸರ್ವರ್ ಸಮಸ್ಯೆ ತಟ್ಟಿದ್ದು, ಆಸ್ಟ್ರೇಲಿಯಾ ಸರ್ಕಾರ ಈ ಬಗ್ಗೆ ತುರ್ತು ಸಭೆ ನಡೆಸಲು ಮುಂದಾಗಿದೆ. ಇನ್ನು ಅಮೇರಿಕಾದ ಎಲ್ಲಾ ವಿಮಾನಗಳ ಸಂಚಾರದಲ್ಲೂ ಕೂಡ ವ್ಯತ್ಯಯವಾಗಿದೆ. ಇದರಿಂದಾಗಿ ಭಾರತದ ಇಂಡಿಗೋ, ಸ್ಪೈಸ್ ಜೆಟ್, ಏರ್ ಇಂಡಿಯಾ ವಿಮಾನ ಸಂಚಾರಕ್ಕೂ ಅಡಚಣೆಯಾಗಿದೆ.