ನವದೆಹಲಿ: ಬಾರೀ ಮಳೆ ಹಿನ್ನೆಲೆ ಇಲ್ಲಿನ ಕೋಚಿಂಗ್ ಸೆಂಟರ್‌ಗೆ ಮಳೆಯ ನೀರು ತುಂಬಿಕೊಂಡು ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೂವರು ಅಭ್ಯರ್ಥಿಗಳು ಸಾವನ್ನಪ್ಪಿರುವ ವಿದ್ರಾವಕ ಘಟನೆ ನವದೆಹಲಿಯಲ್ಲಿ ನಡೆದಿದೆ.
ಕೆಂದ್ರ ದೆಹಲಿಯ ಹಳೆಯ ರಾಜಿಂದರ್ ನಗರ ಪ್ರದೇಶದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಈ ಕೋಚಿಂಗ್ ಸೆಂಟರ್ ನೆಲಮಾಳಿಗೆಯಲ್ಲಿತ್ತು.
ರಾಜೂಸ್ ಐಎಎಸ್ ಸ್ಟಡಿ ಸೆಂಟರ್‌ನ ನೆಲಮಾಳಿಗೆಯು ಮಳೆ ನೀರಿನಿಂದ ಆವೃತ್ತವಾಗಿರುವ ಬಗ್ಗೆ ರಾತ್ರಿ 7ಗಂಟೆ ಸುಮಾರಿಗೆ ಕರೆ ಬಂದಿತ್ತು. ಕೆಲವು ವ್ಯಕ್ತಿಗಳು ನೆಲಮಾಳಿಗೆಯಲ್ಲಿ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ ಎನ್ನುವ ಮಾಹಿತಿ ಬಂತು. ನೆಲಮಾಳಿಗೆ ಸಂಪೂರ್ಣ ಹೇಗೆ ಜಲಾವೃತವಾಯಿತು ಎಂಬುದನ್ನು ನಾವು ತನಿಖೆ ನಡೆಸುತ್ತಿದ್ದೇವೆ. ನೆಲಮಾಳಿಗೆಯು ಅತ್ಯಂತ ವೇಗವಾಗಿ ಜಲಾವೃತಗೊಂಡಿದೆ. ಇದರಿಂದ ಕೆಲವರು ಒಳಗೆ ಸಿಲುಕಿಕೊಂಡಿದ್ದಾರೆ ಎಂದು ಡಿಸಿಪಿ ಹರ್ಷವರ್ಧನ್ ತಿಳಿಸಿದ್ದಾರೆ.
ನೆಲಮಾಳಿಗೆ ಸಂಪೂರ್ಣ ಜಲಾವೃತವಾಗಿದ್ದು, 5 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು ಎಂದು ಅಗ್ನಿಶಾಮಕ ಇಲಾಖೆ ಹೇಳಿದೆ.
ಬಳಿಕ ಸ್ಥಳಕ್ಕಾಗಮಿಸಿದ ಎನ್‌ಡಿಆರ್‌ಎಫ್, ಅಗ್ನಿಶಾಮಕ ಮತ್ತು ಪೊಲೀಸರ ನೆರವಿನಿಂದ ಇಬ್ಬರು ಮಹಿಳಾ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಯ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತರ ಗುರುತುಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಇನ್ನೂ ಮಧ್ಯರಾತ್ರಿವರೆಗೆ ನಡೆದ ಈ ಕಾರ್ಯಚರಣೆಯಲ್ಲಿ ಮಳೆಯ ನೀರನ್ನು ಪಂಪ್ ಮಾಡಿ ಹೊರಗೆ ತೆಗೆಯಾಗಿದೆ.