Mysore
17
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ದೆಹಲಿಯಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ: ಟುಡೇಸ್‌ ಚಾಣಕ್ಯ

ನವದೆಹಲಿ: ದೆಹಲಿಯಲ್ಲಿ ಈ ಬಾರಿ ಬಿಜೆಪಿ 50+ ಸ್ಥಾನ ಗೆಲ್ಲಲಿದೆ ಎಂದು ಟುಡೇಸ್‌ ಚಾಣಕ್ಯ ಭವಿಷ್ಯ ನುಡಿದಿದೆ.

ನಿನ್ನೆ ತನ್ನ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸದ ಟುಡೇಸ್‌ ಚಾಣಕ್ಯ ಇಂದು ಸಂಜೆಯ ವೇಳೆಗೆ ದತ್ತಾಂಶ ಬಿಡುಗಡೆ ಮಾಡಿದೆ.

ಬಿಜೆಪಿ ಮೈತ್ರಿಕೂಟ 51+, ಆಪ್‌ 19+6, ಇತರರು 0+3 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ. ಬಿಜೆಪಿ 49%, ಆಪ್‌ 41%, ಇತರರು 10% ಮತ ಪಡೆಯಬಹುದು ಎಂದು ತಿಳಿಸಿದೆ.

ದೆಹಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಪ್ರಕಟವಾದ 12 ಸಮೀಕ್ಷೆಗಳಲ್ಲಿ 10 ಸಮೀಕ್ಷೆಗಳು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರೆ, 2 ಸಮೀಕ್ಷೆಗಳು ಆಪ್‌ ಜಯಗಳಿಸಲಿದೆ ಎಂದು ತಿಳಿಸಿವೆ.

ಫೆಬ್ರವರಿ.8ರಂದು ದೆಹಲಿ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ.

 

 

 

 

Tags:
error: Content is protected !!