ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ದೆಹಲಿ ಗದ್ದುಗೆ ಏರೋದು ಬಿಜೆಪಿ ಪಕ್ಕಾ ಎನ್ನಲಾಗುತ್ತಿದೆ.
ಬೆಳಿಗ್ಗೆ 8 ಗಂಟೆಗ ಮತ ಎಣಿಕೆ ಶುರುವಾಗಿದ್ದು, ಬಿಜೆಪಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ.
ಬೆಳಿಗ್ಗೆ 9 ಗಂಟೆ ಸುಮಾರಿಗೆ ಬಿಜೆಪಿ 31 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹ್ಯಾಟ್ರಿಕ್ ಕನಸು ಹೊತ್ತಿರುವ ಎಎಪಿ 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ರೆ, ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.
ಈ ಹಿನ್ನೆಲೆಯಲ್ಲಿ ಫಲಿತಾಂಶದ ಆರಂಭದಲ್ಲೇ ಆಪ್‌ಗೆ ತೀವ್ರ ಆಘಾತವಾಗಿದೆ. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಹಾಲಿ ಸಿಎಂ ಅತಿಶಿ, ಮನೀಶ್ ಸಿಸೋಡಿಯಾ ಸೇರಿದಂತೆ ಘಟಾನುಘಟಿ ನಾಯಕರು ತೀವ್ರ ಹಿನ್ನಡೆ ಅನುಭವಿಸಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಯಾವ ಪಕ್ಷ ದೆಹಲಿ ಗದ್ದುಗೆ ಏರಲಿದೆ ಎಂಬುದು ಬಹುತೇಕ ಖಚಿತವಾಗಲಿದೆ.