ನವದೆಹಲಿ: ದೆಹಲಿಯ ಮಾಜಿ ಸಿಎಂ ಅತಿಶಿ ಅವರು ಇಲ್ಲಿನ ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ದೆಹಲಿಯ ಎಎಪಿ ಪ್ರಧಾನ ಕಚೇರಿಯಲ್ಲಿ ಇಂದು(ಫೆಬ್ರವರಿ.23) ನಡೆದ ಶಾಸಕಾಂಗ ಪಕ್ಷದಲ್ಲಿ ಅತಿಶಿ ಅವರ ಹೆಸರನ್ನು ಅನುಮೋದಿಸಲಾಗಿತ್ತು. ಅಂತೆಯೇ ಸಭೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಅತಿಶಿ ಅವರನ್ನು ಶಾಸಕಾಂಗದ ಪಕ್ಷದ ನಾಯಕಿಯನ್ನಾಗಿ ನೇಮಕ ಮಾಡಿದ್ದಾರೆ.
ಅತಿಶಿ ಅವರು ದೆಹಲಿ ವಿಧಾನಸಭೆಯಲ್ಲಿಯೇ ಪ್ರಥಮ ಬಾರಿಗೆ ಆಯ್ಕೆಯಾಗಿರುವ ವಿರೋಧ ಪಕ್ಷದ ಮಹಿಳಾ ನಾಯಕಿಯಾಗಿದ್ದು, ದೆಹಲಿ ಬಿಜೆಪಿ ಸರ್ಕಾರದ ವಿರುದ್ಧ ಕಾರ್ಯ ನಿರ್ವಹಿಸಲಿದ್ದಾರೆ.
ಇತ್ತೀಗೆಷ್ಟೇ ದೆಹಲಿಯ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರು ಅಧಿಕಾರ ವಹಿಸಿದ್ದರು. ಆದರೆ ಎಎಪಿ ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಿರಲಿಲ್ಲ. ಆದರೆ ಇಂದು ಶಾಸಕಾಂಗ ಸಭೆ ನಡೆಸಿ ಕಲ್ಕಾಜಿ ಕ್ಷೇತ್ರದ ಶಾಸಕರಾಗಿರುವ ಅತಿಶಿ ಅವರನ್ನು ನೇಮಕ ಮಾಡಿದೆ.





