ನವದೆಹಲಿ: ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು ಬಿಜೆಪಿ 40, ಎಎಪ 30 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಫೆಬ್ರವರಿ 5 ರಂದು ದೆಹಲಿಯ 70 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಅದರ ಫಲಿತಾಂಶ ಇಂದು(ಫೆಬ್ರವರಿ.8) ಹೊರ ಬೀಳುತ್ತಿದ್ದು ಬಿಜೆಪಿ 40 ಮತ್ತು ಎಪಿಪಿ 30 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಕಾಂಗ್ರೆಸ್ ಮತ್ತು ಇತರೆ ಯಾವುದೇ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸದೇ ಹಿನ್ನೆಡೆಯನ್ನು ಪಡೆದುಕೊಂಡಿದೆ.
ಇನ್ನು ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ನವದೆಹಲಿಯಲ್ಲಿ ಮುನ್ನಡೆ ಸಾಧಿಸಿದದ್ದರೆ, ಕಲ್ಕಾಜಿ ಕ್ಷೇತ್ರದಲ್ಲಿ ಹಾಲಿ ಮುಖ್ಯಮಂತ್ರಿ ಅತಿಶಿ ಅವರು ಹಿನ್ನೆಡೆ ಸಾಧಿಸಿದ್ದಾರೆ.





