ನವದೆಹಲಿ: ರಾಮನಗರಿ ಅಯೋಧ್ಯೆಯಲ್ಲಿ 25 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿಸಿ ಗಿನ್ನಿಸ್ ದಾಖಲೆ ನಿರ್ಮಿಸಲಾಗಿದೆ.
25 ಲಕ್ಷಕ್ಕೂ ಹೆಚ್ಚಿನ ಮಣ್ಣಿನ ದೀಪಗಳನ್ನು ಒಟ್ಟಿಗೆ ಬೆಳಗಿಸಲಾಗಿದೆ. ಇದರೊಂದಿಗೆ ವೇದಾಚಾರ್ಯರು ಏಕಕಾಲದಲ್ಲಿ ಆರತಿ ಮಾಡುವ ಮೂಲಕ ಎರಡು ದಾಖಲೆ ನಿರ್ಮಾಣ ಮಾಡಿದ್ದಾರೆ.
ಹೆಚ್ಚಿನ ಜನರು ಏಕಕಾಲದಲ್ಲಿ ಆರತಿ ಬೆಳಗುವುದು ಹಾಗೂ ದೀಪಗಳ ದೊಡ್ಡ ಪ್ರದರ್ಶನಕ್ಕಾಗಿ ಮಾರ್ಗಸೂಚಿಗಳ ಅನ್ವಯ ಗಿನ್ನಿಸ್ ರೆಕಾರ್ಡ್ ಪ್ರಶಸ್ತಿ ಪಡೆದಿದೆ.
ವರ್ಷದಿಂದ ವರ್ಷಕ್ಕೆ ದೀಪೋತ್ಸವ ದಾಖಲೆ ಮುರಿಯುತ್ತಿದ್ದು, ಮುಂದಿನ ಬಾರಿಯೂ 50 ಲಕ್ಷ ದೀಪಗಳನ್ನು ಬೆಳಗಿಸಲು ಈಗಾಗಲೇ ಅಂದಾಜು ಮಾಡಿಕೊಳ್ಳಲಾಗಿದೆ.