ನವದೆಹಲಿ: ವಿಧಾನ ಪರಿಷತ್ ಸದಸ್ಯರ ನಾಮ ನಿರ್ದೇಶನ ಸದ್ಯದಲೇ ಆಗಲಿದ್ದು, ಸದನದಲ್ಲಿ ಧ್ವನಿ ಎತ್ತುವವರಿಗೆ ಅವಕಾಶ ನೀಡಬೇಕಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಇಂದು(ಏಪ್ರಿಲ್.4) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಈಗಷ್ಟೇ ವಿಧಾನ ಪರಿಷತ್ ಸದಸ್ಯರ ಆಯ್ಕೆ ಬಗ್ಗೆ ಚರ್ಚೆ ಮಾಡಿದ್ದು, ಕಾರ್ಯಕರ್ತರಿಗೆ ಅವಕಾಶ ನೀಡಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ. ಅಲ್ಲದೇ ಸದನದಲ್ಲಿ ಧ್ವನಿ ಎತ್ತುವವರಿಗೆ ಪಕ್ಷದಲ್ಲಿ ಸ್ಥಾನ ಕೊಡಬೇಕಾಗಿದೆ. ಹೀಗಾಗಿ ಸದ್ಯದಲ್ಲೇ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ನಿರ್ದೇಶನವಾಗಲಿದೆ ಎಂದು ಹೇಳಿದರು.
ಇನ್ನು ನಮ್ಮ ಪಕ್ಷದಿಂದ ಖಾಲಿ ಇರುವ ನಿರುದ್ಯೋಗಿಗಳಿಗೆ ಅವಕಾಶ ನೀಡಿದಂತೆ ಆಗಬಾರದು. ಹಾಗಾಗಿ ಉತ್ತಮವವಾಗಿ ಮಾತನಾಡುವಂತಹ ಪ್ರತಿನಿಧಿಗಳಿಗೆ ಸ್ಥಾನ ನೀಡಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ ಎಂದರು.