ಭುವನೇಶ್ವರ: ಡಾನಾ ಚಂಡಮಾರುತದ ಪರಿಣಾಮ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಚಂಡಮಾರುತ ಒಡಿಶಾದ ಕರಾವಳಿ ಜಿಲ್ಲೆಗಳು ಮತ್ತು ಪಶ್ಚಿಮ ಬಂಗಾಳವನ್ನು ಅಪ್ಪಳಿಸಿದ್ದು, ಇಂದು ಸಂಜೆಯವರೆಗೂ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಡಾನಾ ಚಂಡಮಾರುತದ ಮುನ್ನೆಚ್ಚರಿಕೆಯಾಗಿ ಸುಮಾರು 203 ರೈಲುಗಳನ್ನು ಸಹ ರದ್ದುಗೊಳಿಸಲಾಗಿದೆ.
ಚಂಡಮಾರುತದ ಪರಿಣಾಮ ಹಲವು ಕಡೆ ಜಲ ದಿಗ್ಭಂಧನ ಏರ್ಪಟ್ಟಿದ್ದು, ಸಾವಿರಾರು ಜನರನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.
ಇಂದು ರಾತ್ರಿಯ ವೇಳೆಗೆ ಮಳೆ ಕಡಿಮೆಯಾಗಲಿದ್ದು, ನಾಳೆಯ ವೇಳೆಗೆ ಜನಜೀವನ ಸಹಜ ಸ್ಥಿತಿಯತ್ತ ಮರಳಲಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.